QR Code Business Card

ತಾಲೂಕು ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಶ್ರೀನಿಧಿ ಶಂಕರ್ 100 ಮೀ(ಪ್ರ), 2೦೦ಮೀ(ಪ್ರ) ಸುಶಾನ್ ಪ್ರಕಾಶ್ 2೦೦ಮೀ(ದ್ವಿ), ಅಕ್ಷಿತ್ ಭಂಡಾರಿ 6೦೦ಮೀ(ಪ್ರ), ಅಮಿತ್ ಬೋರ್ಕರ್ 4೦೦ ಮೀ(ದ್ವಿ), ಬರ್ಫಿ ಲಮಾರೆ ಲಾಂಗ್‌ಜಂಪ್, ಹ್ಶೆಜಂಪ್ , ಚಕ್ರಎಸೆತ(ಪ್ರಥಮ ಹಾಗೂ ವೈಯಕ್ತಿಕ ಚಾಂಪಿಯನ್), ಶ್ರೀನಿಧಿ ಶಂಕರ್, ಸುಶಾನ್ ಪ್ರಕಾಶ್, ಬರ್ಫಿ ಲಮಾರೆ, ಅಮಿತ್ ಬೋರ್ಕರ್ ಇವರ ತಂಡ 4×100 ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಅನಘ.ಕೆ.ಎನ್ 1೦೦ಮೀ(ಪ್ರ), 2೦೦ಮೀ(ಪ್ರ), ಲಾಂಗ್‌ಜಂಪ್(ದ್ವಿ), (ವೈಯಕ್ತಿಕ ಚಾಂಪಿಯನ್), ಅನಘ.ಕೆ.ಎ. 4೦೦ಮೀ(ಪ್ರ), ಲಾಂಗ್‌ಜಂಪ್(ಪ್ರ), ವಿನಮೃತಾ.ಎಸ್.ಪಿ. 6೦೦ಮೀ(ದ್ವಿ), ವಂಶಿ.ಬಿ.ಕೆ 2೦೦ಮೀ(ದ್ವಿ), ಲಿಖಿತಾ.ಬಿ.ರೈ 4೦೦ ಮೀ(ದ್ವಿ), ಮಾನ್ಯ ಹ್ಶೆಜಂಪ್(ಪ್ರ).

14 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಪಿರ್ಕಾಟ್ ಸಫ್ರಾಂಗ್ ಲಿಂಗ್ಡೊ 2೦೦ಮೀ(ಪ್ರ), 6೦೦ಮೀ(ಪ್ರ), ಲಾಂಗ್‌ಜಂಪ್(ಪ್ರಥಮ ಹಾಗೂ ವೈಯಕ್ತಿಕ ಚಾಂಪಿಯನ್), ಶ್ರೇಯಸ್ ದೀಕ್ಷಿತ್ 4೦೦ಮೀ(ದ್ವಿ), ಬಾಲಕಿಯರ ವಿಭಾಗದಲ್ಲಿ ಶ್ರಾವ್ಯ 4೦೦ಮೀ(ಪ್ರ), 6೦೦ಮೀ(ಪ್ರ), ಪೂಜಾಶ್ರೀ 2೦೦ಮೀ(ದ್ವಿ), ಸುಷ್ಮಾ ಚಕ್ರ ಎಸೆತ(ದ್ವಿ), ಶ್ರಾವ್ಯ, ಚಿತ್ತಾರ ಹಿರಿಂಜ, ಶಿವಾನಿ, ಪೂಜಾಶ್ರೀ ಇವರ ತಂಡ 4×100 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

17 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಂದನ್ ಕುಮಾರ್ 1೦೦ಮೀ(ಪ್ರ), 2೦೦ಮೀ(ದ್ವಿ), ಲಾಂಗ್‌ಜಂಪ್(ದ್ವಿ), ಸುಶಾನ್ ಬಪ್ಪಳಿಗೆ 8೦೦ಮೀ(ಪ್ರ), 4೦೦ಮೀ(ದ್ವಿ), ಚಿರಾಗ್ ಮನೋಹರ್ ರೈ ಚಕ್ರ ಎಸೆತ(ಪ್ರ), ಚಿರಾಯು ಮನೋಹರ್ ರೈ ಗುಂಡೆಸೆತ(ಪ್ರ), ಪಿರ್ಕಾಟ್.ಎಸ್.ಪಾಸ್ಸ್ 2೦೦ಮೀ(ತೃ), ವನ್ರಬಾಕ್ ಚಕ್ರಎಸೆತ(ದ್ವಿ), ಈಟಿಎಸೆತ(ದ್ವಿ), ಬಂಟೈಲಾಂಗ್ ತ್ರಿಪಲ್‌ಜಂಪ್ (ತೃ), ಚಂದನ್ ಕುಮಾರ್, ಸುಶಾನ್ ಬಪ್ಪಳಿಗೆ, ಬಂಟೈಲಾಂಗ್, ಪಿರ್ಕಾಟ್.ಎಸ್.ಪಾಸ್ಸ್ ಇವರ ತಂಡ 4×100 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಪ್ರಣಮ್ಯಾ ಶೆಟ್ಟಿ ಈಟಿಎಸೆತ(ಪ್ರ), ಗುಂಡೆಸೆತ(ದ್ವಿ), ಚಕ್ರಎಸೆತ(ದ್ವಿ), ಧನ್ಯಶ್ರೀ ಲಾಂಗ್‌ಜಂಪ್(ತೃ), ಖುಷಿ ರೈ 1೦೦ಮೀ(ದ್ವಿ), 2೦೦ಮೀ(ದ್ವಿ), ಲಿಖಿತಾ ರೈ 4೦೦ಮೀ(ದ್ವಿ), 8೦೦ಮೀ(ದ್ವಿ), ಖುಷಿ ರೈ, ಲಿಖಿತಾ ರೈ , ಧನ್ಯಶ್ರೀ, ಚರಿತಾ.ಬಿ.ಆರ್ ಇವರ ತಂಡ 4×100 ಮೀ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯಗುರುಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.