QR Code Business Card

NITK Engiconnect 2018 – ಶಾಲೆಯ 3 ವಿದ್ಯಾರ್ಥಿಗಳು ಆಯ್ಕೆ

ಎನ್‌ಐಟಿಕೆ ಸುರತ್ಕಲ್ ಇವರು ನಡೆಸಿದ Engiconnect 2018 ದಿನಾಂಕ 14-10-2018 ರಂದು ಎನ್‌ಐಟಿಕೆ ಸುರತ್ಕಲ್ ಆವರಣದಲ್ಲಿ ನಡೆದ ವಸ್ತು ಪ್ರದರ್ಶನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 13 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದು ಇದರಲ್ಲಿ 7ನೇ ತರಗತಿಯ ಅತಿಶಯ ಜೈನ್, ಕರಣ್ ಎಂ.ಭಟ್ ಮತ್ತು ಚಿನ್ಮಯ ಕೃಷ್ಣ ವರ್ಮ ಇವರು ಮಂಡಿಸಿದ Solar powered Multipurpose machine ಪ್ರಥಮ ಸ್ಥಾನ ಗಳಿಸಿ, ಎನ್‌ಐಟಿಕೆಯವರ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿರುತ್ತಾರೆ. 7ನೇ ತರಗತಿಯ ಅಭಿಷೇಕ್.ಬಿ, ಹರ್ಷೇಂದ್ರ ಪ್ರಸಾದ್, ನವನೀತ್ ಶಾಸ್ತ್ರಿ ಇವರು Line follower, 7ನೇ ತರಗತಿಯ ಪ್ರಕೃತ್.ಜಿ.ಕೆ, ದೇವಿಪ್ರಸಾದ್.ಎಸ್, ಶಮಂತ.ಎಂ ಇವರು Agriculture wind fan, 7ನೇ ತರಗತಿಯ ವಿಂಧ್ಯಾ ಕಾರಂತ್, ಅನುಪಮ ಸಿ., ಸಂಸ್ಕೃತಿ.ಜೆ.ಜೈನ್‌ ಇವರು Home made medicine, 9ನೇ ಸ್ವೀಕೃತ ಕೆ.ಸಿ Estimation of Radiation Dose due to consumption of Medicinal Plants ಎಂಬ ಯೋಜನಾ ಕಾರ್ಯವನ್ನು ಮಂಡಿಸಿ ಭಾಗವಹಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.