ಮಂಗಳೂರಿನ ಸಹ್ಯಾದ್ರಿ ಸಂಸ್ಥೆಯಲ್ಲಿ ನವಂಬರ್ 8 ರಿಂದ 10 ರ ವರೆಗೆ ನಡೆದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 11 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ 7ನೇ ತರಗತಿಯ ಕರಣ್ ಎಮ್. ಭಟ್, ಅತಿಶಯ್ ಜೈನ್ ಮತ್ತು ಚಿನ್ಮಯ ಕೃಷ್ಣ ತಂಡ Solar Powered Multipurpose Machine ಪ್ರಾಜೆಕ್ಟ್‌ಗೆ ಪ್ರಥಮ ಪ್ರಶಸ್ತಿ ಪಡೆದಿರುತ್ತಾರೆ. 10 ನೇ ತರಗತಿಯ ಕೌಶಲ್ ಸುಬ್ರಹ್ಮಣ್ಯ, ವಿಷ್ಣುಪ್ರಸಾದ್ ಎಮ್, ಸಾತ್ವಿಕ್ ಜಿ.ಎನ್, ಮತ್ತು ಮಯೂರ್ ಬಿ.ಜಿ. ತಂಡದ Radar System ಪ್ರಾಜೆಕ್ಟ್ ವಿದ್ಯಾರ್ಥಿ ನಿಧಿ ಬಹುಮಾನದೊಂದಿಗೆ ತಾಂತ್ರಿಕ ತರಭೇತಿಗೆ ಆಯ್ಕೆಯಾಗಿದೆ. 10 ನೇ ತರಗತಿಯ ಧ್ಯಾನ್ ಎಸ್ ರಾವ್, ಆಶಿಷ್ ಶಂಕರ್, ಅಂಕಿತ್ ರೈ ಮತ್ತು ಶಶಾಂಕ್ ಬಿ. ತಂಡ An Innovative System to Prevent Road Accident ಪ್ರಾಜೆಕ್ಟ್‌ನ್ನು ಪ್ರದರ್ಶಿಸಿದ್ದು, ಪ್ರೋತ್ಸಾಹಕ ಬಹುಮಾನವನ್ನು ಪಡೆದಿರುತ್ತಾರೆ. ಇವರಿಗೆ ವಿಜ್ಞಾನ ವಿಭಾಗದ ಶಾರದ ಶೆಟ್ಟಿ, ರಾಜಶೇಖರ್ ಬಿ.ಸಿ ಮತ್ತು ಶಾಂತಿ ಎಸ್ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.