ಕೇಂದ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಡಿ.ಎಸ್.ಇ.ಆರ್.ಟಿ.ಬೆಂಗಳೂರು Ministry of Science & Technology, Govt. of India ಈ ಸಂಸ್ಥೆಗಳು ಸಂಯೋಜಿಸಿದ Inspire Award Manak ಎಂಬ ವ್ಶೆಜ್ಞಾನಿಕ ಮಾದರಿ ಯೋಜನೆ ರಾಜ್ಯಮಟ್ಟದ ಸ್ಪರ್ಧೆಯು ಇತ್ತೀಚೆಗೆ ಮೈಸೂರಿನ ಆದರ್ಶ ವಿದ್ಯಾಲಯದಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಅನ್ವಿತ್ ಎನ್. A novel product by Saloon waste [hair] to increase soil fertility ಎಂಬ ಬಹು ಉಪಯುಕ್ತ ಉತ್ಪನ್ನ ತಯಾರಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈತನು ಶ್ರೀಪತಿ.ಎನ್ ಮತ್ತು ಇರ್ದೆ ಶಾಲಾ ಶಿಕ್ಷಕಿ ವಿದ್ಯಾಲಕ್ಷ್ಮಿ ಇವರ ಸುಪುತ್ರ. ರಾಷ್ಟ್ರಮಟ್ಟದ ಸ್ಪರ್ಧೆಯು ಫೆಬ್ರವರಿಯಲ್ಲಿ ನಡೆಯಲಿರುವುದು ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.