ಗುಜರಾತಿನ ರಾಜ್ಕೋಟ್ನಲ್ಲಿ Science Society of Indiaವು ಇತ್ತೀಚೆಗೆ ಆಯೋಜಿಸಿದ INSEF ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9 ನೇ ತರಗತಿಯ ಆರ್. ಶರುಣ್ ಶಶಿಧರ್ ಭಾಗವಹಿಸಿದ್ದು ಇವರ PLASTINK A NOVEL IDEA TO MAKE INK FROM PLASTIC ಪ್ರಾಜೆಕ್ಟ್ ಕಂಚಿನ ಪದಕ ಪಡೆದಿದೆ. ಇವರಿಗೆ ವಿಜ್ಞಾನ ವಿಭಾಗದ ಶಿಕ್ಷಕಿ ಶಾರದ ಶೆಟ್ಟಿ ಮತ್ತು ಕಂಪ್ಯೂಟರ್ ವಿಭಾಗದ ಶಿಕ್ಷಕ ರಾಜಶೇಖರ್ ಬಿ.ಸಿ. ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.