ಮುಂಬಯಿ ಮಹಾರಾಷ್ಟ್ರದ ರಂಗೋತ್ಸವ ಸೆಲೆಬ್ರೇಷನ್ 2019 ಸಂಸ್ಥೆಯು ನಡೆಸಿದ ರಾಷ್ಟ್ರಮಟ್ಟದ ಚಿತ್ರ ಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಮೋಘವಾಗಿ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ.
ಕಿರಿಯರ ವಿಭಾಗದಲ್ಲಿ ಮೂರನೇ ತರಗತಿಯ ಅನನ್ಯ ಪ್ರಥಮ ಸ್ಥಾನ ಪಡೆದು ತೃತೀಯ ಸ್ಥಾನವನ್ನು 3 ನೇ ತರಗತಿಯ ಮಾನ್ಯ ಹಾಗೂ 4ನೇ ತರಗತಿಯ ಅನುಶ್ರೀ ಪಡೆದುಕೊಂಡಿದ್ದಾರೆ.
ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಮನ್ನಿತ್ ದ್ವಿತೀಯ ಸ್ಥಾನ ಪಡೆದರು ಹಾಗೂ ತೃತೀಯ ಸ್ಥಾನವನ್ನು ಒಂಬತ್ತನೇ ತರಗತಿಯ ವೃಂದಾ ಪಡೆದುಕೊಂಡಿದ್ದಾರೆ.
ಈ ಸ್ಪರ್ಧೆಯಲ್ಲಿ 69 ಚಿನ್ನದ ಪದಕಗಳು ಹಾಗೂ ಹನ್ನೆರಡು ಆರ್ಟ್ ಮೆರಿಟ್ ಟ್ರೋಫಿಗಳು ಹಾಗೂ 21 ಇನ್ನಿತರ ವಿಶೇಷ ಪ್ರಶಸ್ತಿಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಜೊತೆಗೆ ಈ ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದು 10 ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಅದೇ ರೀತಿ ವಿವೇಕಾನಂದ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗೆ ಗೋಲ್ಡನ್ ಗ್ಲೋಬಲ್ ಪ್ರಶಸ್ತಿ ದೊರಕಿದ್ದು, ಈ ಸ್ಪರ್ಧೆಯ ಮುಂದಾಳತ್ವ ವಹಿಸಿದ ಚಿತ್ರಕಲಾ ಶಿಕ್ಷಕಿ ರಶ್ಮೀ ಶೆಟ್ಟಿಯವರಿಗೆ ಕಲಾ ಭೂಷಣ ಪ್ರಶಸ್ತಿ ದೊರಕಿದೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಕರಾದ, ರಶ್ಮೀ ಶೆಟ್ಟಿ, ಮಹೇಶ್ ಹಿರೇಮಣಿ, ಟೀಲಾಕ್ಷ, ಚೇತನ್ ಕುಮಾರ್ ತರಬೇತಿ ನೀಡಿದ್ದಾರೆ ಎಂದು ಮುಖ್ಯ ಗುರುಗಳಾದ ಸತೀಶ್ ರೈ ತಿಳಿಸಿದ್ದಾರೆ.