QR Code Business Card

ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆ

ದಿನಾಂಕ 21-06-2019 ನೇ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಯೋಗ ವಿಶ್ವಕ್ಕೆ ಭಾರತದ ಕೊಡುಗೆ, ಪತಂಜಲಿಯ ಯೋಗ ಶಾಸ್ತ್ರವು ಮಾನವ ಬದುಕಿನ ಪ್ರಮುಖ ಭಾಗವೆಂದು ಪರಿಗಣಿಸಿ ಜೂನ್ ೨೧ನೇ ತಾರೀಕನ್ನು ವಿಶ್ವ ಯೋಗ ದಿನ ಎಂದು ಆಚರಿಸುತ್ತಿದ್ದೇವೆ. ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಇಂದು ಭಾರತ ವಿಶ್ವ ಗುರುವಾಗುವಲ್ಲಿ ದಿಟ್ಟ ಹೆಜ್ಜೆಯನ್ನು ಇರಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯೇ ಸರಿ. ಕೇವಲ ಯೋಗವು ಈ ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತೀ ದಿನವು ಆಚರಿಸುವಂತಗಾಲಿ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ತಾಲೂಕು ಮಟ್ಟದ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

 

ಮುಖ್ಯ ಅತಿಥಿಯಾಗಿ ಮಾತನಾಡಿದ ಪುತ್ತೂರಿನ ಸಹಾಯಕ ಕಮೀಷನರ್ ಶ್ರೀ ಕೃಷ್ಣಮೂರ್ತಿ ಸಿ.ಎಚ್‌ರವರು ಯೋಗ ಮಾಡಿದರೆ ಮಾನವ ದೇಹಕ್ಕೆ ಉತ್ತಮ. ಹಣ, ಸಂಪತ್ತು ಎಷ್ಟೇ ಮಾನವನಲ್ಲಿ ಇರಬಹುದು ಆದರೇ ಮಾನವನು ರೋಗಗ್ರಸ್ತನಾದರೆ ಅವೆಲ್ಲ ವ್ಯರ್ಥ. ಇದನ್ನು ಹೋಗಲಾಡಿಸಬೇಕಾದರೆ ಯೋಗ ಅತ್ಯಗತ್ಯವೆಂದು ಹೇಳಿದರು. ವೇದಿಕೆಯಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಕನ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಸುಂದರ ಗೌಡ, ಯುವಜನ ಕೇಂದ್ರದ ಸಂಯೋಜನಾಧಿಕಾರಿಯಾದ ಶ್ರೀ ಮಾಮಚ್ಚನ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಅಬ್ರಹಂ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರಾದ ಶ್ರೀ ಬಿರ್ಮಣ್ಣ ಗೌಡ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ್, ಶ್ರೀಮತಿ ವಸಂತಿ , ಶ್ರೀಮತಿ ಸುನೀತಾ, ಶ್ರೀ ಭರತ್ ಪೈ ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸತೀಶ್ ಕುಮಾರ್ ರೈ ಸ್ವಾಗತಿಸಿ, ಶಿಕ್ಷಕಿ ಕುಮಾರಿ ಹಿತಾ ಪ್ರಾರ್ಥಿಸಿ, ದಕ್ಷಿಣ ಕನ್ನಡ ಜಿಲ್ಲಾ ಯೋಗ ಸಂಘದ ಅಧ್ಯಕ್ಷರಾದ ಶ್ರೀ ರಾಮಣ್ಣ ರೈ ಪ್ರಸ್ತಾವನೆಗೈದು, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ, ಕೆ.ಜಿ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಮಮತಾ, ದೈಹಿಕ ಶಿಕ್ಷಕರಾದ ಶ್ರೀ ಭಾಸ್ಕರ ಗೌಡ, ಶ್ರೀ ಗಿರೀಶ್, ಶ್ರೀ ದೀಪಕ್, ಶ್ರೀಮತಿ ಹರ್ಷಿತಾ, ಶ್ರೀಮತಿ ಆಶಾಲತಾ, ಶ್ರೀಮತಿ ವಾಣಿಶ್ರೀ, ಕು. ರಶ್ಮಿ ಸಹಕರಿಸಿದರು. ಶಿಕ್ಷಕರಾದ ಶ್ರೀ ಗಣೇಶ್ ಏತಡ್ಕ ಕಾರ್ಯಕ್ರಮ ನಿರ್ವಹಿಸಿದರು. ನಂತರ ಶಾಲಾ ಯೋಗ ಸಂಯೋಜಕಿ ಶ್ರೀಮತಿ ನಮಿತಾರವರು ಮಕ್ಕಳಿಗೆ ಸೂರ್ಯನಮಸ್ಕಾರ ಮತ್ತು ಯೋಗದ ವಿವಿದ ಆಯಾಮಗಳನ್ನು ಹೇಳಿಕೊಟ್ಟರು.