QR Code Business Card

ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ

ದಿನಾಂಕ 5-7-2019 ನೇ ಶುಕ್ರವಾರದಂದು ವಿವೇಕಾನಂದಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶಿಕ್ಷಕರ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾದಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರಾದ ಶ್ರೀ ಬಿರ್ಮಣ್ಣಗೌಡ ಇವರು ಮಾತನಾಡಿ ಶಿಕ್ಷಕರು ದಿನದಿಂದ ದಿನಕ್ಕೆ ಹೆಚ್ಚು ಕ್ರಿಯಾಶೀಲರಾದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುವುದು. ಆಧುನಿಕ ಶಿಕ್ಷಣ ಪದ್ಧತಿಯಜೊತೆಗೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಯನ್ನು ಪರಿಪೂರ್ಣರನ್ನಾಗಿಸಬಹುದುಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಡಾ. ಶಶಿಧರ್ ಕಜೆಯವರು ಶಿಕ್ಷಣ ನಿಂತ ನೀರಲ್ಲ ಅದು ಸದಾ ಚಲಿಸುವ ನೀರು. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಹಿರಿಯರ ಸಂಸ್ಕಾರಗಳು ನಮಗೆ ದಾರಿದೀಪಗಳಾಗಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀ ಎಚ್. ಎ. ಜಯಸಿಂಹ ಉಪಸ್ಥಿತರಿದ್ದರು. ಶಿಕ್ಷಕರ ಸಮೂಹಿಕ ಸರಸ್ವತಿ ವಂದನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಂತರ ಸಂಪನ್ಮೂಲ ವ್ಯಕ್ತಿ ಶ್ರೀ ಎಚ್. ಎ ಜಯಸಿಂಹರವರು ಪರಿಣಾಮಕಾರಿ ಭೋಧನೆಯ ಕೌಶಲ್ಯಗಳು ಎಂಬ ವಿಚಾರದ ಕುರಿತು ಶಿಕ್ಷಕರಿಗೆ ತರಗತಿ ಸಂವಹನೆ ವಿದ್ಯಾರ್ಥಿ ಸಂವಾದಕ್ರಿಯಾತ್ಮಕ ತರಗತಿಗಳನ್ನು ನಡೆಸುವುದರ ಬಗ್ಗೆ ಮಹತ್ವದ ಮಾಹಿತಿಗಳನ್ನು ತಮ್ಮಜಾದುವಿನ ಮೂಲಕ ಶಿಕ್ಷಕರಿಗೆ ನೀಡಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮದ ಪೂರ್ಣ ವಿರಾಮ ನೀಡಲಾಯಿತು.