QR Code Business Card

ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ

ವಿವೇಕಾನಂದ ಶಾಲೆ, ಜಾಲ್ಸೂರು (ವಿನೋಬನಗರ) ಇಲ್ಲಿ 13-7-2019 ರಂದು ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗಳಿಸಿರುತ್ತಾರೆ.

ಬಾಲವರ್ಗ ಹುಡುಗರು:
ರಿದಮಿಕ್ ವಿಭಾಗದ ಯೋಗಾಸನದಲ್ಲಿ ಚೈತನ್ಯ ಬಿ. ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ (ಪ್ರಾಂತ) ಆಯ್ಕೆಯಾಗಿರುತ್ತಾರೆ.
ಕಿಶೋರ ವರ್ಗದ ಬಾಲಕರ ಗುಂಪು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ ಹಾಗೂ ವೈಯಕ್ತಿಕ ವಿಭಾಗದಲ್ಲಿ ನಿಶ್ಚಲ್ ಕೆ. ಜೆ. (9ನೇ) ದ್ವಿತೀಯ ಸ್ಥಾನ, ಮನ್ನಿತ್ ಕೆ. (9ನೇ)-ಚತುರ್ಥ ಸ್ಥಾನ, ಭವಿಷ್ (9ನೇ)-ಪಂಚಮ ಸ್ಥಾನ ಗಳಿಸಿರುತ್ತಾರೆ. ಚೈತ್ರೇಶ್ (10ನೇ) ಮತ್ತು ಆಶ್ರಿತ್ (10ನೇ) ಭಾಗವಹಿಸಿರುತ್ತಾರೆ.

ಕಿಶೋರ ವರ್ಗದ ರಿದಮಿಕ್ ವಿಭಾಗದ ಯೋಗಾಸನದಲ್ಲಿ ಮನ್ನಿತ್ ಕೆ. (9ನೇ) ಪ್ರಥಮ ಸ್ಥಾನ
ಕಿಶೋರ ವರ್ಗದ ಅಥ್ಲೆಟಿಕ್ಸ್ ವಿಭಾಗದಲ್ಲಿ ನಿಶ್ಚಲ್ ಕೆ. ಜೆ. (9ನೇ)-ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ (ಪ್ರಾಂತ) ಆಯ್ಕೆಯಾಗಿರುತ್ತಾರೆ.