ಆಗಸ್ಟ್ 8 ರಂದು ಬಾಲವನ ಈಜುಕೊಳದಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಕನ್ನಡ ಮತ್ತು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇದರ ವತಿಯಿಂದನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ಆಗಸ್ಟ್ 11ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಬಾಲವರ್ಗದ ಬಾಲಕರಲ್ಲಿ ಆತ್ಮೀಯ ಕಶ್ಯಪ್ 400 ಮೀಟರು ಫ್ರೀಸ್ಟೈಲ್ ದ್ವಿತೀಯ, 100 ಮೀಟರ್ ಬೆಸ್ಟ್ ಸ್ಟ್ರೋಕ್ ದ್ವಿತೀಯ, ಧನ್ವಿತ್ – 50 ಫ್ರೀಸ್ಟೈಲ್ ಮೀಟರ್ ನಲ್ಲಿ ಪ್ರಥಮ, 50 ಮೀಟರ್ ಬ್ಯಾಕ್ ಸ್ಟ್ರೋಕ್ ತೃತೀಯ,100 ಮೀಟರ್ ಫ್ರೀಸ್ಟೈಲ್ ನಲ್ಲಿ ದ್ವಿತೀಯ.
ಕಿಶೋರ ವರ್ಗ ಬಾಲಕನಲ್ಲಿ ಸಾತ್ವಿಕ್ – 800 ಮೀಟರ್ ಫ್ರೀಸ್ಟೈಲ್ ನಲ್ಲಿ ಪ್ರಥಮ, 50 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಪ್ರಥಮ 100 ಮೀಟರ್ ಫ್ರೀಸ್ಟೈಲ್ ನಲ್ಲಿ ದ್ವಿತೀಯ, ನೂತನ್ ಬಿ – 400 ಮೀಟರ್ ಐ.ಎಂ ನಲ್ಲಿ ಪ್ರಥಮ,200ಮೀಟರ್ ಬಟರ್ಫ್ಲೈ ನಲ್ಲಿ ಪ್ರಥಮ, 100ಮೀಟರ್ ಬಟರ್ಫ್ಲೈ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇದರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ