ದಿನಾಂಕ 15-08-2019 ರಂದು ವಿವೇಕಾನಂದಆಂಗ್ಲ ಮಾಧ್ಯಮ ಶಾಲೆಯಲ್ಲಿ 73 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತೀಯ ಸೇನೆಯ ನಿವೃತ್ತ ಸೈನಿಕರಾದ ಶ್ರೀ ರಾಧಕೃಷ್ಣರವರು ಧ್ವಜಾರೋಹಣಗೈದು, ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯ ಕೇವಲ ಆಡಂಬರವಾಗದೆ ಅರ್ಥಪೂರ್ಣ ಆಚರಣೆಯಾಗಬೇಕು, ನಮ್ಮ ಮೂಲಭೂತ ಹಕ್ಕನ್ನು ನಾವು ಪಾಲನೆ ಮಾಡುವುದು ಕಾನೂನು ಚೌಕಟ್ಟಿಗೆ ಒಳಪಟ್ಟಿರಬೇಕು. ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲಿಯೇ ದೇಶ ಪ್ರೇಮದ ಮೌಲ್ಯಗಳನ್ನು ಮೂಡಿಸಬೇಕು. ದೇಶ ಪ್ರೇಮ ಎನ್ನುವುದು ಕೇವಲ ಸೈನಿಕರಿಗೆ ಸೀಮಿತವಲ್ಲ ಅದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕು. ಕೆಲವು ರಾಜಕೀಯ ದುಷ್ಟಶಕ್ತಿಗಳು ನಮ್ಮ ಇಂದಿನ ಯುವ ಪೀಳಿಗೆಯನ್ನು ದಾರಿತಪ್ಪಿಸುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರು ವಿವೇಚನೆಯಿಂದ ದೇಶ ಸೇವೆಯಲ್ಲಿ ತೊಡಗಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶಿವಪ್ರಕಾಶ್, ಸಂಚಾಲಕರಾದ ಶ್ರೀ ಮುರಳೀಧರ, ಹಿರಿಯ ಸದಸ್ಯರಾದ ಶ್ರೀ ಭಿರ್ಮಣ್ಣಗೌಡ ಹಾಗೂ ಆಡಳಿತ ಮಂಡಳಿ ಸದಸ್ಯರು , ಶಿಕ್ಷಕ-ರಕ್ಷಕ ಸಂಘದ ನೂತನ ಅಧ್ಯಕ್ಷರಾದ ಶ್ರೀ ಆರ್.ಸಿ.ನಾರಾಯಣ, ಹಾಗೂ ಪೋಷಕರು ಉಪಸ್ಥಿತರಿದ್ದರು. ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಿನೇಶ್ಚಂದ್ರ ಟಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಸತೀಶ್‌ಕುಮಾರ್ ರೈ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಮಾ. ಸಾತ್ವಿಕ್ ಅತಿಥಿಗಳನ್ನು ಧ್ವಜಾರೋಹಣಕ್ಕೆ ಆಹ್ವಾನಿಸಿದನು. ವಿದ್ಯಾರ್ಥಿನಿಯರು ರಾಷ್ಟ್ರಗೀತೆಯನ್ನು ಹಾಡಿ, ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕರು ಸಹಕರಿಸಿದರು. ನಂತರ ನಿವೃತ್ತ ಸೈನಿಕರಾದ ಶ್ರೀ ರಾಧಕೃಷ್ಣರವರೊಡನೆ ಮಕ್ಕಳು ಸಂವಾದ ನಡೆಸಿ ದೇಶದ ಸೈನಿಕರು ಸ್ಥಿತಿಗತಿಗಳ ಬಗ್ಗೆ ತಿಳಿದುಕೊಂಡರು.