QR Code Business Card

ವಿನೂತನ ರೀತಿಯ ರಕ್ಷಾಬಂಧನ ಆಚರಣೆ

ದಿನಾಂಕ 15-08-2019 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಇಲ್ಲಿ ತಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಶಾಲಾ ಬಸ್ ಚಾಲಕರಿಗೆ ಶಾಲಾ ಮಕ್ಕಳು ರಕ್ಷೆಯನ್ನು ಕಟ್ಟುವುದರ ಮೂಲಕ ನಮ್ಮನ್ನು ಸದಾ ರಕ್ಷಿಸಿ ಎಂದು ಆರ್ಶೀವಾದ ಪಡೆದು ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಗ್ರಾಮಾಂತರ ತಾಲೂಕು ಕಾರ್ಯವಾಹಕರಾದ ಶ್ರೀ ಚರಣ್‌ರಾಜ್‌ ಅವರು ಮಾತನಾಡಿ ಭಾರತದ ಪರಂಪರೆಯಲ್ಲಿ ಶ್ರಾವಣ ಹುಣ್ಣಿಮೆಯ ಶುಭದಿನದಂದು ರಕ್ಷಾಬಂಧನವನ್ನು ಆಚರಿಸುತ್ತೇವೆ. ದಕ್ಷಿಣ ಭಾರತಕ್ಕಿಂತಲೂ ಉತ್ತರಭಾರತದ ಪ್ರತಿ ಮನೆಗಳಲ್ಲಿಯೂ ತಂಗಿ ಅಣ್ಣನ ಪೂಜೆ ಮಾಡಿ ತಿಲಕವನಿಟ್ಟು ರಕ್ಷೆಯನ್ನು ಕಟ್ಟಿ ಸಿಹಿಯನ್ನು ಹಂಚಿ ಆರ್ಶೀವಾದ ಪಡೆದು ರಕ್ಷಾಬಂಧನ ಆಚರಿಸುತ್ತಾರೆ. ಭಾರತೀಯರನ್ನು ಒಂದುಗೂಡಿಸುವ ಏಕೈಕ ಮಾರ್ಗವೆಂದರೆ ಅದು ರಕ್ಷಾಬಂಧನ. ನಮ್ಮಲ್ಲಿರುವ ಸೋಮನಾಥದೇವಾಲಯದ ಅವನತಿಗೆ ನಮ್ಮಲ್ಲಿ ಒಗ್ಗಟ್ಟಿಲ್ಲದ್ದೇ ಕಾರಣ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾ ಬಸ್ ಚಾಲಕರು ಉಪಸ್ಥಿತರಿದ್ದರು. ಅತಿಥಿಗಳು ಭಾರತಮಾತೆಗೆ ರಕ್ಷೆಕಟ್ಟಿ ನಾವೆಲ್ಲರೂ ಒಂದೇ ಎಂದು ಸಾರಿದರು. ಸಾಂಪ್ರದಾಯಕವಾಗಿ ತಂಗಿ ಅಣ್ಣನಿಗೆ ಆರತಿಯನ್ನು ಬೆಳಗಿ, ತಿಲಕವನ್ನು ಹಣೆಗಿಟ್ಟು ರಕ್ಷೆಯನ್ನು ಕಟ್ಟಿದರು. ಮುಖ್ಯೋಪಾಧ್ಯಾಯರಾದ ಸತೀಶ್‌ಕುಮಾರ್‌ ರೈ ಸ್ವಾಗತಿಸಿ, ವಿದ್ಯಾರ್ಥಿ ಹರ್ಷಿತ್‌ ರಕ್ಷಬಂಧನಗೀತೆಯನ್ನು ಹಾಡಿದನು. ಶಿಕ್ಷಕಿರಾದ ಸಾಯಿಗೀತಾರಾವ್‌ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕರಾದ ದೀಪಕ್ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ ಸಹಕರಿಸಿದರು.