ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ ಯೋಗ ಸ್ಪರ್ಧೆಯು ದಿನಾಂಕ ಅಗಸ್ಟ್ 9,10 ಮತ್ತು 11 ರಂದು ಜೈಗೋಪಾಲ್ ಗಾರೋಡಿ ಯಾರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರಿನಲ್ಲಿ ನಡೆಯಿತು. ನಮ್ಮ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನ ಗಳಿಸಿರುತ್ತಾರೆ.
ಮನ್ವಿತ್, 9ನೇ ತರಗತಿ [ಎನ್. ರಮೇಶ್ಗೌಡ, ಕ್ಯಾಂಪ್ಕೋ ಚೊಕ್ಲೇಟ್ ಫ್ಯಾಕ್ಟರಿ ಉದ್ಯಮಿ ಇವರ ಪುತ್ರ] – ಕಿಶೋರ ವರ್ಗದ ರಿಧಮಿಕ್ (Rhythmic) ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾನೆ. ನಿಶ್ಚಲ್ (ಜನಾರ್ಧನ ಕೆ. ಬಿ., ಜಿಲ್ಲಾ ಪಂಛಾಯತ್ ಸದಸ್ಯರು) ವಿದ್ಯಾಭಾರತಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಿಶೋರ ವರ್ಗದ ಎತ್ಲೆಟಿಕ್ (Athletic) ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಚೈತನ್ಯ ಬಿ. (ರಾಮಕೃಷ್ಣ ಪ್ರಕಾಶ್ ಬಿ., ಬಿ.ಎಸ್.ಎನ್.ಎಲ್) ವಿದ್ಯಾಭಾರತಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ರಿಧಮಿಕ್ (Rhythmic), ಮತ್ತು ಭವಿಷ್ ಎಸ್. (ಶೇಖರ್, ಸಿವಿಲ್ ಇಂಜಿನಿಯರ್) ಕಿಶೋರ ವರ್ಗದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾನೆ.