QR Code Business Card

ಅಡ್ವಾನ್ಸ್ಡ್ ಚೆಸ್‌ ತರಬೇತಿ ಕಾರ್ಯಾಗಾರ

ದಿನಾಂಕ 22-08-2019 ನೇ ಗುರುವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಡ್ವಾನ್ಸ್ಡ್ ಚೆಸ್‌ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಈ ತರಬೇತಿ ಕಾರ್ಯಾಗಾರವನ್ನು ಶಾಲಾ ಪೋಷಕರಾದ ಡಾ. ಮಹಾಲಿಂಗೇಶ್ವರ ಪ್ರಸಾದ್‌ರವರು ಉದ್ಘಾಟಿಸಿ, ಕ್ರೀಡೆಯು ಮಾನವನ ದೈಹಿಕ ಮಾನಸಿಕ ಅಭಿವೃದ್ಧಿಗೆ ಪೂರಕವಾಗಿರಬೇಕು. ಆ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾಸಂಸ್ಥೆ ಹಲವಾರು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡು ಮಕ್ಕಳ ಯೋಚನೆ ಮತ್ತು ಜ್ಞಾಪನ ಶಕ್ತಿಯನ್ನು ವೃದ್ಧಿಸುವಲ್ಲಿ ಕೈಗೊಂಡ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯುನೈಟೆಡ್‌ ಕರ್ನಾಟಕ ಚೆಸ್ ಅಸೊಸಿಯೇಶನ್‌ನ ಚಿಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಆದ ಶ್ರೀ ಅರವಿಂದ ಶಾಸ್ತ್ರಿ ಯವರು ಮಾತನಾಡಿ ಚೆಸ್‌ ಇಂದು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿದ್ದು ಮಕ್ಕಳ ಬೌದ್ಧಿಕ ವಿಕಾಸಕ್ಕೆ ಇದು ಮುಖ್ಯ ಮಕ್ಕಳ ಶೈಕ್ಷಣಿಕ ಚಟುವಟಿಕೆಯೊಂದಿಗೆ ಇಂತ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡಾಗ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀ ಭಿರ್ಮಣ್ಣ ಗೌಡರವರು ವಹಿಸಿದರು. ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಆರ್.ಸಿ.ನಾರಾಯಣ, ಪೋಷಕರಾದ ಶ್ರೀ ಶ್ರೀರಾಮ ಪಟಾಜೆ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಭಾಸ್ಕರ್‌ಗೌಡ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್‌ಕುಮಾರ್‌ರೈ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಿದ್ಯಾರ್ಥಿನಿ ಶುಭಶ್ರೀ ಪ್ರಾರ್ಥಿಸಿ, ಶಿಕ್ಷಕ ಶ್ರೀ ಗಣೇಶ್‌ ಏತಡ್ಕ ಧನ್ಯವಾದದೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಂತರ ಮುಖ್ಯ ತರಬೇತುದಾರರು ಶಾಲೆಯ ರಾಷ್ಟ್ರೀಯ ಮಟ್ಟದ ಚೆಸ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.