ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯು ತಾ. 19-08-2019 ರಂದು ಸಾಂಧೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ 17 ರ ವಯೋಮಾನದ ಬಾಲಕರ ಗುಂಪು ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆ ಮತ್ತು ವೈಯುಕ್ತಿಕ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುತ್ತಾರೆ.
ಗುಂಪು ಸ್ಪರ್ಧೆಯಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳು- ನಿಶ್ಚಲ್ ಕೆ.ಜೆ – 9ನೇ ತರಗತಿ, ಭವಿಷ್ ಎಸ್ – 9ನೇ ತರಗತಿ, ಚೈತ್ರೇಶ್ – 10 ನೇ ತರಗತಿ, ಸುಶಾಂತ್ – 8ನೇ ತರಗತಿ.
ವೈಯುಕ್ತಿಕ ಸ್ಪರ್ಧೆ (ರಿದಮಿಕ್ ಯೋಗ) – ಮನ್ನಿತ್ – 9 ನೇ ತರಗತಿ (ಪ್ರಥಮ ಸ್ಥಾನ) ವೈಯುಕ್ತ್ತಿಕ ಗುಂಪು ಸ್ಪರ್ಧೆ – ನಿಶ್ಚಲ್ ಕೆ.ಜೆ. – 9ನೇ ತರಗತಿ, ಪ್ರಥಮ ಸ್ಥಾನ, ಚೈತ್ರೇಶ್ – 10 ನೇ ತರಗತಿ, 5ನೇ ಸ್ಥಾನ ಪಡೆದುಕೊಂಡಿದ್ದಾರೆ.
ನಿಶ್ಚಲ್ ಕೆ.ಜೆ., ಚೈತ್ರೇಶ್, ಮನ್ನಿತ್ ಇವರು ತಾ. 27-09-2019 ರಂದು ಮೂಡಬಿದ್ರೆಯ ಬೆಳುವಾಯಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.