ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಪುತ್ತೂರು ಮತ್ತು ಸೈಂಟ್ ಆಂಟ್ಸ್ಆಂಗ್ಲ ಮಾಧ್ಯಮ ಶಾಲೆ, ಕಡಬ ಇಲ್ಲಿ ಅಗಸ್ಟ್ 16 ಮತ್ತು 17 ರಂದು ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ 17 ರ ವಯೋಮಾನದ ಬಾಲಕರ ವಿಭಾಗದಲ್ಲಿ ನೂತನ್ ಬಿ, 10ನೇ (ಶ್ರೀ ವಸಂತಗೌಡ ಮತ್ತು ಶ್ರೀಮತಿ ಕೆ ಚಂದ್ರಾವತಿ ಇವರ ಪುತ್ರ), ಪ್ರಣವ್ಎಸ್, 10 ನೇ ತರಗತಿ (ಶ್ರೀ ಪ್ರಭಾಕರ್ ಮತ್ತು ಶ್ರೀಮತಿ ಶಾಂತಿ ಕೆ ಇವರ ಪುತ್ರ), ಲಕ್ಷ್ಮೀಶ್, 10 ನೇ ತರಗತಿ (ಶ್ರೀ ಗಣೇಶ್ ಕುಮಾರ್ ಮತ್ತು ಶ್ರೀಮತಿ ಗಾಯತ್ರಿ ಕೆ. ಎಚ್. ಇವರ ಪುತ್ರ), ಶ್ರೇಯಸ್ ಕೆ, 9ನೇ ತರಗತಿ ( ಶ್ರೀ ರಾಮ ಮೂರ್ತಿ ಮತ್ತು ಶ್ರೀಮತಿ ಶ್ವೇತಾ ಇವರ ಪುತ್ರ), ಮನ್ವಿತ್ ಪಟ್ಲಾ, 9ನೇ ತರಗತಿ (ಶ್ರೀ ಮಾದವ ಕೆ ಮತ್ತು ಪೂರ್ಣಿಮಾ ಇವರ ಪುತ್ರ) ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಹರ್ಷಿತಾ ಪಿ, 7ನೇ ತರಗತಿ (ಶ್ರೀ ಸಂತೋಷ್ ನಾಯ್ಕ ಮತು ಶ್ರೀಮತಿ ಕವಿತಾ ಇವರ ಪುತ್ರಿ), ಅಪೂರ್ವ , 7ನೇ ತರಗತಿ (ಶ್ರೀ ಶ್ರೀಧರ ಶೆಟ್ಟಿ ಮತ್ತು ಶ್ರೀಮತಿ ಬೇಬಿ ಶೆಟ್ಟಿ ಇವರ ಪುತ್ರಿ), ಅಂಶಿ ಎ ಶೆಟ್ಟಿ (ಶ್ರೀ ಅರುಣ್ ಶೆಟ್ಟಿ ಮತ್ತು ಶ್ರೀಮತಿ ಶಾಲಿನಿ ಬಿ ಇವರ ಪುತ್ರಿ), ಶ್ರೇಯಾ, 7ನೇ ತರಗತಿ (ಶ್ರೀ ಅನಂತ ಕೃಷ್ಣರಾವ್ ಮತ್ತು ಶ್ರೀಮತಿ ವೀಣಾರಾವ್ ಇವರ ಪುತ್ರಿ), ಸಾನ್ವಿ, 6ನೇ ತರಗತಿ (ಶ್ರೀ ಜೆ ನೆಲ್ಸನ್ ನಾವಿನ್ ಮತ್ತು ಶ್ರೀಮತಿ ವಾಣಿ ಇವರ ಪುತ್ರಿ) ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
U-14ರ ವಯೋಮಾನದಲ್ಲಿ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಪುಣ್ಯ, 8ನೇ ತರಗತಿ (ಶ್ರೀ ರಾಧಕೃಷ್ಣ ಬಿ ಮತು ಶ್ರೀಮತಿ ಸುನೀತಾ ಆರ್. ಎನ್. ಇವರ ಪುತ್ರಿ), ಅನುಪಮ, 8ನೇ ತರಗತಿ (ಶ್ರೀ ಕೃಷ್ಣ ಪ್ರಶಾಂತ್ ಮತ್ತು ಶ್ರೀಮತಿ ಸೌಮ್ಯ ಇವರ ಪುತ್ರಿ) ಆಯ್ಕೆಗೊಂಡ 22-08-2019 ರಂದು ಬೆಳ್ತಂಗಡಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.