ದಿನಾಂಕ 3-9-2019 ನೇ ಮಂಗಳವಾರದಂದು ನಿಟ್ಟೆ ಎ.ಬಿ ಶೆಟ್ಟಿ ಮೊಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್, ರೋಟರಿ ಕ್ಲಬ್ ಪುತ್ತೂರು ಪೂರ್ವ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ದ.ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2 ದಿನಗಳ ದಂತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್, ಕಲ್ಲಡ್ಕರವರು ಹಲ್ಲುಗಳು ಮನುಷ್ಯನ ದೇಹದ ಗೇಟ್ವೇ ಆಫ್ ಇಂಡಿಯಾ ಇದ್ದ ಹಾಗೇ ಭಾರತ ರಕ್ಷಣೆಗೆ ಗೇಟ್ವೇ ಆಫ್ ಇಂಡಿಯಾ ಎಷ್ಟು ಪ್ರಮುಖವಾಗಿದೆಯೇ ಅದೇ ರೀತಿ ನಮ್ಮ ದೇಹವನ್ನು ರಕ್ಷಣೆ ಮಾಡಲು ಹಲ್ಲುಗಳ ಸ್ವಚ್ಛತೆ ಅತ್ಯಂತ ಮುಖ್ಯ 1942 ರಲ್ಲಿ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭಿಸಿದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಫಿಟ್ ಇಂಡಿಯಾದ ಮೂಲಕ ದೇಶದ ಜನರಲ್ಲಿ ಆರೋಗ್ಯ ಪ್ರಜ್ಞೆಯನ್ನು ಮೂಡಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರಿಯ ಜಿಲ್ಲಾ ಗವರ್ನರ್ ರೋಟರಿಯನ್ ಶ್ರೀ ಜೋಸೆಫ್ ಮ್ಯಥ್ಯೂರವರು ಮಾತನಾಡಿ ಮಕ್ಕಳು ಸಿಹಿ ತಿಂಡಿಗಳನ್ನು ಕಡಿಮೆ ಮಾಡಿದರೆ ಹಲ್ಲುಗಳು ಸುರಕ್ಷಿತವಾಗಿರಬಹುದು. ಮಕ್ಕಳ ಹಲ್ಲಿನ ಸುರಕ್ಷತೆಗಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎ.ಬಿ. ಶೆಟ್ಟಿ ಮೊಮೊರಿಯಲ್ ಡೆಂಟಲ್ ಸೈನ್ಸ್ನ ಪ್ರಾಂಶುಪಾರಾದ ಡಾ. ಯು.ಎಸ್ ಕೃಷ್ಣ ನಾಯಕ್, ಡೆಂಟಲ್ ಸಯನ್ಸ್ ಉಪನ್ಯಾಸಕಿ ಸಹನಾ ಮಾಬೆನ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಡಾ. ಶಿವಪ್ರಕಾಶ್, ಸಂಚಾಲಕರಾದ ಶ್ರೀ ಮುರಳೀಧರ್ ಕೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಆರ್.ಸಿ ನಾರಾಯಣ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷರಾದ ಡಾ. ಶ್ಯಾಮ್ಪ್ರಸಾದ್ ರವರು ಸ್ವಾಗತಿಸಿ, ಗೈಡ್ಸ್ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕರಾದ ಶ್ರೀ ಸತೀಶ್ ಕುಮಾರ್ ರೈ ವಂದಿಸಿ, ಶಿಕ್ಷಕ ಶ್ರೀ ಗಣೇಶ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ನಂತರ ಎಲ್.ಕೆ.ಜಿಯಿಂದ 10ನೇ ತರಗತಿವರೆಗಿನ ಮಕ್ಕಳ ಹಲ್ಲುಗಳನ್ನು ಪರೀಕ್ಷಿಸಲಾಯಿತು.