QR Code Business Card

ತಾಲೂಕು ಮಟ್ಟದ ವಿವೇಕ ಕ್ರೀಡಾ ಸಂಭ್ರಮ 2019 ರ ಸಮಾರೋಪ ಸಮಾರಂಭ

ದಿನಾಂಕ 18-10-2019 ೯ನೇ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟ -ವಿವೇಕ ಕ್ರೀಡಾ ಸಂಭ್ರಮ 2019 ರ ಸಮಾರೋಪ ಸಮಾರಂಭವು ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎಂ.ಶಿವಪ್ರಕಾಶ್ ಭಟ್ ಇವರು ಮಾತನಾಡಿ ನಮ್ಮ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷವಾಗಿದೆ. ಗಾಂಧೀಜಿಯವರ ಸ್ವಚ್ಛ ಭಾರತದ ಕಲ್ಪನೆಯಂತೆ ತಾಲೂಕಿನ ಕ್ರೀಡಾಕೂಟದಲ್ಲಿ ಸ್ವಚ್ಛತೆಗೆ ಆದತ್ಯೆ ನೀಡಲಾಗಿದೆ. ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ ಎನ್ನುವುದಕ್ಕೆ ಎರಡು ದಿನದ ತಾಲೂಕಿನ ಕ್ರೀಡಾಕೂಟ ಸಾಕ್ಷಿಯಾಗಿದೆ ಎಂದು ಅಧ್ಯಕ್ಷೀಯ ಮಾತಿನಲ್ಲಿ ಹೇಳಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಾಮಾಜಿಕ ನ್ಯಾಯ ಸಮಿತಿಯ ತಾಲೂಕು ಪಂಚಾಯತ್ ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಹರೀಶ್ ಬಿಜತ್ರೆ ಅವರು ಮಾತನಾಡಿ ತಾಲೂಕಿನ ಕ್ರೀಡಾಕೂಟದ ಯಶಸ್ವಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅವಿರತ ಶ್ರಮ, ತಾಲೂಕಿನ ಎಲ್ಲ ದೈಹಿಕ ಶಿಕ್ಷಕರ ಕಾರ್ಯಕ್ಷಮತೆ ಕಾರಣವಾಗಿದೆ ಎಂದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾದ ಶ್ರೀ ಸುಂದರ ಗೌಡ ಇವರು ಮಾತನಾಡಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗಳು ಮತ್ತು ಶಿಕ್ಷಕ ವೃಂದದವರ ಶ್ರಮ ಶ್ಲಾಘನೀಯವಾದುದು. ಇದು ಕೇವಲ ತಾಲೂಕಿನ ಕ್ರೀಡಾಕೂಟವಲ್ಲ ರಾಜ್ಯಮಟ್ಟದ ಕ್ರೀಡಾಕೂಟದಂತೆ ಕಂಡು ಬಂದಿದೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಶ್ರೀ ರವಿನಾರಾಯಣ ಸಂಚಾಲಕರು, ಆಡಳಿತ ಮಂಡಳಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಶ್ರೀಮತಿ ರೂಪಲೇಖ, ಅಧ್ಯಕ್ಷರು, ಆಡಳಿತ ಮಂಡಳಿ ನರೇಂದ್ರ ಪಿ.ಯು.ಕಾಲೇಜು, ಪುತ್ತೂರು ಶ್ರೀ ಮುರಳೀಧರ.ಕೆ, ಸಂಚಾಲಕರು, ಆಡಳಿತ ಮಂಡಳಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಶ್ರೀ ಕೆ.ವಿಶ್ವಾಸ್ ಶೆಣೈ, ಅಧ್ಯಕ್ಷರು, ಸ್ವಾಗತ ಸಮಿತಿ, ತಾಲೂಕು ಕ್ರೀಡಾಕೂಟ, ಶ್ರೀ ಮಾಮಚ್ಚನ್, ಯುವಜನ ಸಬಲೀಕರಣ ಕ್ರೀಡಾಧಿಕಾರಿ, ಪುತ್ತೂರು, ಶ್ರೀ ಪುನೀತ್ ರೈ ಕುರಿಯ ಎಳ್ನಾಡುಗುತ್ತು, ಗೌರವಾಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಶ್ರೀ ನಿರೀಕ್ಷಿತ್ ರೈ, ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಶ್ರೀ ಲಕ್ಷ್ಮಣ ಗೌಡ ಬೆಳ್ಳಿಪಾಡಿ, ತಾಲೂಕು ಪಂಚಾಯತ್ ಸದಸ್ಯರು, ಶ್ರೀ ಅಮಿತ್ ಪ್ರಕಾಶ್ ರೋಡ್ರಿಗಸ್, ಮುಖ್ಯಸ್ಥರು, ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ, ಕಡಬ, ಶ್ರೀ ಆರ್.ಸಿ.ನಾರಾಯಣ, ಅಧ್ಯಕ್ಷರು, ರಕ್ಷಕ-ಶಿಕ್ಷಕ ಸಂಘ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶಿವರಾಮ ಏನೆಕಲ್, ಗೌರವಾನ್ವಿತ ಜಿಲ್ಲಾ ಪಂಚಾಯತ್ ಹಾಗೂ ನಗರ ಸಭಾ ಸದಸ್ಯರು ಹಾಗೂ ಜಿಲ್ಲಾ ಮತ್ತು ತಾಲೂಕು ಶಿಕ್ಷಕರ ಸಂಘದ ಗೌರವಾನ್ವಿತ ಅಧ್ಯಕ್ಷರು, ಕಾರ್ಯದರ್ಶಿಗಳು, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಸದಸ್ಯರಾದ ಶ್ರೀ ಚಂದ್ರಶೇಖರ ಸ್ವಾಗತಿಸಿ, ವಿದ್ಯಾರ್ಥಿನಿಯರು ಪ್ರಾರ್ಥಿಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ವಂದಿಸಿ, ಶಿಕ್ಷಕರಾದ ಶ್ರೀ ಗಣೇಶ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಗಿರೀಶ್ ಕಣಿಯಾರು ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು. ಶಾಲಾ ದೈಹಿಕ ಶಿಕ್ಷಕರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದ, ಪೋಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಸಹಕರಿಸಿದರು.