AnveshanaAgriTinkering Fest 2019-20 invite Industries/Companies to evaluate/measure innovative ideas of the participants in the field of agriculture. You can commercialize, scale up their ideas and provide platform to execute their product under your bannerfurther. Fest will be scheduled on 30th November and 1st of December at Vivekananda English Medium School, Tenkila, Puttur Patronized by Vivekananda Vidyavardhakasangha ® Puttur. Firms can participate only on 1st December 2019. Please confirm your participation by filling the form in the Web link anveshana.vivekanandaedu.org or Google app link. https://forms.gle/zQB3P2hwece8vtV96
ಕೃಷಿ ಸಂಬಂಧಿತ ಸಂಸ್ಥೆಗಳಿಗೆ ಅನ್ವೇಷಣಾ ಅಗ್ರಿಟಿಂಕರಿಂಗ್ ಫೆಸ್ಟ್ 2019 ಗೆ ಆಹ್ವಾನ
ಅನ್ವೇಷಣಾ -2019 ರಾಜ್ಯಮಟ್ಟದ ಅಗ್ರಿಟಿಂಕರಿಂಗ್ ಫೆಸ್ಟ್ ದಿನಾಂಕ ನವಂಬರ್ 30 ಮತ್ತು ಡಿಸೆಂಬರ್ 1 ರಂದು ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ), ಪುತ್ತೂರು ಇದರ ಅಡಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಸಂಸ್ಥೆ, ತೆಂಕಿಲ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ಪ್ರಥಮ ಬಾರಿಗೆ ಆಯೋಜಿಸುತ್ತಿದ್ದು, ಕೃಷಿ ಆಲೋಚನೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಕೃಷಿಪರ ಆಸಕ್ತಿಯುಳ್ಳ ಬಂಧುಗಳು ತಮ್ಮ ಹೊಸ ಕಲ್ಪನೆಯ ಆವಿಷ್ಕಾರ, ಸಂಶೋಧನೆಗಳನ್ನು ಪ್ರದರ್ಶಿಸಿ, ಪ್ರಾಯೋಗಿಕ ರೂಪಕ್ಕೆ ತಂದು ಮಾರಾಟ ಮಾಡಲು ಅನುಕೂಲವಾಗುವಂತೆ ಕೃಷಿ ಸಂಬಂಧಿತ ಸಂಸ್ಥೆಗಳ ಸಂಪರ್ಕಕ್ಕೆ ಅವಕಾಶ ಮಾಡಿಕೊಡುತ್ತಿದೆ. ಕೃಷಿ ಸಂಬಂಧಿತ ಸಂಘ ಸಂಸ್ಥೆಗಳು ಹೊಸ ಆವಿಷ್ಕಾರಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದಲ್ಲದೆ, ತಮ್ಮದೇ ಸಂಸ್ಠೆಯ ಅಡಿಯಲ್ಲಿ ಹಕ್ಕು ಪತ್ರವನ್ನು ವಿತರಿಸಲು ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ದಿನಾಂಕ ಡಿಸೆಂಬರ್ 1 ರಂದು ಕೃಷಿ ಸಂಬಂದಿತ ಸಂಘ ಸಂಸ್ಥೆಗಳನ್ನು ಆಹ್ವಾನಿಸುತ್ತಿದ್ದು ಆನ್ ಲೈನ್‌ಲಿಂಕ್ anveshana.vivekanandaedu.org ಅಥವಾ ಗೂಗಲ್ ಆಪ್ ಲಿಂಕ್ https://forms.gle/zQB3P2hwece8vtV96 ಮುಖೇನ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಲು ಕೋರಲಾಗಿದೆ.