ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುಸ್ತಕ ಅನಾವರಣ ದಿನಾಂಕ 14.11.2019 ಪ್ರೊಫೆಸರ್ ಹರಿನಾರಾಯಣ ಅವರು ಬರೆದಿರುವ ಉಲ್ಲಾಸಣ್ಣ ಜನಜೀವನ ಸಾಧನೆಯ ಕುರಿತಾದ ಅಕ್ಷರ ಚಿತ್ರಗಳು ಗಾರುಡಿಗ, ಚಿಣ್ಣರ ಕುಣಿಸುವ ಉಲ್ಲಾಸಣ್ಣ ಎಂಬ ಪುಸ್ತಕವನ್ನು ಬಿ.ವಿ ಸೂರ್ಯನಾರಾಯಣ ಪ್ರಾಂಶುಪಾಲರು ಪದವಿಪೂರ್ವ ಕಾಲೇಜು ಸವಣೂರು ಇವರು ಅನಾವರಣಗೊಳಿಸಿದರು.
ನುಡಿದಂತೆ ನಡೆಯುವವರು, ಸರಳ ಸಜ್ಜನಿಕೆಯವರು, ಮಾತಾ-ಪಿತೃಗಳ ಸೇವೆಯನ್ನು ಮಾಡಿ ಧನ್ಯತೆಯನ್ನು ಪಡೆದ ವ್ಯಕ್ತಿ ಉಲ್ಲಾಸಣ್ಣ ಎಂಬುದಾಗಿ ಹೇಳಿದರು. ಸಭೆಯ ಅಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್ ಇವರು ಉಲ್ಲಾಸಣ್ಣ ರವರನ್ನು ಶ್ಲಾಘಿಸಿದರು. ಕೃತಿಕಾರರರಾದ ಪ್ರೊ ಹರಿನಾರಾಯಣ ಮಾಡಾವು ಉಲ್ಲಾಸಣ್ಣ ರ ಜೀವನಗಾಥೆಯನ್ನು ಮನಮುಟ್ಟುವಂತೆ ತಿಳಿಯಪಡಿಸಿದರು.
ಪ್ರೊ.ಬಿ.ವಿ. ಅರ್ತಿಕಜೆ ಸಾಹಿತಿ ತಮ್ಮ ಸ್ವರಚಿತ ಕವನದಲ್ಲಿ ಉಲ್ಲಾಸಣ್ಣ ಅವರ ಸರಳತೆ, ನಿಸ್ವಾರ್ಥ ಸೇವೆಯ ಕುರಿತು ವಾಚಿಸಿ ಶುಭಕೋರಿದರು. ವಿದ್ಯಾರ್ಥಿಗಳು ನಲ್ಮೆಯ ಮಾತು ಹಾಗೂ ಸ್ವರಚಿತ ಕವನಗಳನ್ನು ವಾಚಿಸಿದರು. ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಉಪಸ್ಥಿತರಿದ್ದು ಗಣ್ಯರನ್ನು ಗೌರವಿಸಿದರು ಶ್ರೀಮತಿ ಆಶಾ ಕೆ. ಸ್ವಾಗತಿಸಿ ಶ್ರೀಮತಿ ಪುಷ್ಪಲತಾ ಬಿ. ಕೆ. ವಂದಿಸಿದರು ಶ್ರೀಮತಿ ಗೀತಾ ಎಸ್. ರಾವ್ ಕಾರ್ಯಕ್ರಮ ನಿರೂಪಿಸಿದರು.