QR Code Business Card

ವಿವೇಕಾನಂದ ಜಯಂತಿ ಆಚರಣೆ

ದಿನಾಂಕ 13-1-2020 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರು ಮಾತನಾಡಿ ವಿವೇಕಾನಂದರು ವಿಶ್ವ ಕಂಡ ಮೊದಲ ತತ್ವಜ್ಞಾನಿ. ಅವರು ಜ್ಞಾನದ ಹುಡುಕಾಟವನ್ನು ಮಾಡುತ್ತಾ ತನ್ನ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ತನ್ನ ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡರು. ವಿವೇಕಾನಂದರ ಚಿಂತನೆ ಮಾರ್ಗದರ್ಶನಗಳು ಪ್ರಸ್ತುತ ಸಮಾಜದ ನಿರ್ಮಾಣಕ್ಕೆ ಅತ್ಯಗತ್ಯ. ಪ್ರತಿ ಮಗುವಿನಲ್ಲಿ ವಿವೇಕಾನಂದ ಆದರ್ಶಗಳು ಮೈಗೂಡಿದಾಗ ನಿಜವಾದ ಭಾರತ ನಿರ್ಮಾಣವಾಗುವುದು. ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ ಗುಲಾಮಗಿರಿಯಿಂದ ತೊಳಲಾಡುತ್ತಿದ್ದ ಭಾರತವನ್ನು ತಮ್ಮ ಮಾತಿನ ಮೂಕ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದರು ಎಂದು ಹೇಳಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಭರತ್ ಪೈ, ಹಿರಿಯ ಅಧ್ಯಾಪಕಿ ಶ್ರೀಮತಿ ಪುಷ್ಪಲತ.ನಿ.ಕೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ. ಶಿಕ್ಷಕ ಗಣೇಶ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪುಟಾಣಿ ಮಕ್ಕಳು ವಿವೇಕಾನಂದರ ವೇಷ ಹಾಕಿ ಸಂಭ್ರಮಿಸಿದರು. ಮಧ್ಯಾಹ್ನ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ, ಹಾಗೂ ಪೋಷಕರಿಗೆ ಊಟ-ಉಪಚಾರ ನೀಡಲಾಯಿತು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.