QR Code Business Card

ರಥಸಪ್ತಮಿ ಕಾರ್ಯಕ್ರಮ ಆಚರಣೆ

ದಿನಾಂಕ 1-2-2020 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ರಥಸಪ್ತಮಿ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಏಕಕಾಲದಲ್ಲಿ ಸಾವಿರ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಖಜಾಂಚಿಯಾಗಿರುವ ಶ್ರೀ ಪ್ರಸನ್ನ ಕುಮಾರ್ ವಹಿಸಿದರು, ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಶಾಲಾ ಶಿಕ್ಷಕರಾದ ಶ್ರೀ ಅಭಿಲಾಷ್ ಆಳ್ವಾರವರು ಭಾಗವಹಿಸಿ ರಥಸಪ್ತಮಿಯ ಬಗ್ಗೆ ಮಾಹಿತಿ ನೀಡಿ, ಸೂರ್ಯ ನಮಸ್ಕಾರ ಮಾಡುವುದರಿಂದ ವಿವೇಕ ಜಾಗೃತಗೊಳ್ಳುತ್ತದೆ, ವಿವೇಕದಿಂದ ಆನಂದ ಸಿಗುವುದು ಎಂದು ಈ ಮೂಲಕ ಸೂರ್ಯ ನಮಸ್ಕಾರದ ಮಹತ್ವದ ಬಗ್ಗೆ ತಿಳಿಸಿದರು.

ಹಾಗೆಯೇ ಮುಖ್ಯ ಅತಿಥಿಗಳಾಗಿ ಶಿಕ್ಷಕ -ರಕ್ಷಕ ಸಂಘದ ಸದಸ್ಯರಾದ ಅನುಭವ್‌ ಕನ್‌ಸ್ಟ್ರಕ್ಷನ್ ಮಾಲಕರಾದ ಶ್ರೀ ರಾಧಾಕೃಷ್ಣ ನಂದಿಲ, ವಿವೇಕಾನಂದ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರವಿ ಮುಂಗ್ಲಿಮನೆ ಹಾಗೂ ಶಾಲಾ ಸಂಚಾಲಕರಾದ ಶ್ರೀ ಮುರಳೀಧರ ಕೆ. ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ-ಶಿಕ್ಷಕೇತರ ಬಂಧುಗಳು ಉಪಸ್ಥಿತರಿದ್ದರು. ದೈಹಿಕಶಿಕ್ಷಣ ಶಿಕ್ಷಕ ಭಾಸ್ಕರಗೌಡರವರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಆಶಾಲತ ಕೆ. ವಂದಿಸಿದರು, ದೈಹಿಕ ಶಿಕ್ಷಣ ಶಿಕ್ಷಕಿ ನಮಿತ ಕೆ. ಕೆ. ರವರು ಕಾರ್ಯಕ್ರಮ ನಿರೂಪಿಸಿದರು. ಸಾಮೂಹಿಕ ಸೂರ್ಯ ನಮಸ್ಕಾರವನ್ನು ದೈಹಿಕಶಿಕ್ಷಣ ಶಿಕ್ಷಕ ಶ್ರೀ ದೀಪಕ್ ಹಾಗೂ ಎಲ್ಲಾ ದೈಹಿಕ ಶಿಕ್ಷಕರು ನೆರವೇರಿಸಿ, ಸಹಕರಿಸಿದರು.