2019 ನೇ ನವೆಂಬರ್ 30 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಅನ್ವೇಷಣ ರಾಜ್ಯ ಮಟ್ಟದ ಆಗ್ರಿಟಿಂಕರಿಂಗ್ ಫೆಸ್ಟ್ನಲ್ಲಿ ಲಘು ಉದ್ಯೋಗ ಭಾರತಿ ವತಿಯಿಂದ ಪ್ರಾಯೋಜಕತ್ವಕ್ಕೆ ಆಯ್ಕೆಯಾದ ಸ್ಪರ್ಧಾಳುಗಳ ಸಂವಾದ ಕಾರ್ಯಕ್ರಮ ಫೆಬ್ರವರಿ 6 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಜರುಗಿತು.
ಈ ಸಂವಾದ ಕಾರ್ಯಕ್ರಮದಲ್ಲಿ ಲಘು ಉದ್ಯೋಗ ಭಾರತಿ ವತಿಯಿಂದ ಬೆಂಗಳೂರಿನ ಉದ್ಯಮಿಗಳಾದ ಶ್ರೀ ಕೆ ನಾರಾಯಣ ಪ್ರಸನ್ನ, ಶ್ರೀ ನಾಗರಾಜ್ ಮೇಲ್ಕೋಟೆ, ಶ್ರೀ ಗಿರೀಶ್ ವಿ. ಗುಮಾಸ್ತೆ ಹಾಗೂ ಶ್ರೀ ಎಂ. ಜಿ. ಪ್ರೇಮಾನಂದ್ ಇವರುಗಳು ಭಾಗವಹಿಸಿ ಸ್ಪರ್ಧಾಳುಗಳೊಂದಿಗೆ ಸಂವಾದ ನಡೆಸಿದರು ಹಾಗೂ ಭವಿಷ್ಯದಲ್ಲಿ ಸ್ಪರ್ಧಾಳುಗಳು ತಯಾರಿಸಿದ ಮಾದರಿಗಳನ್ನು ವಾಣಿಜ್ಯ ಉತ್ಪನ್ನವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಬಗ್ಗೆ ಚರ್ಚೆಯನ್ನು ನಡೆಸಿದರು, ಲಘು ಉದ್ಯೋಗ ಭಾರತಿ ವತಿಯಿಂದ ಸ್ಪರ್ಧಾಳುಗಳ ಮಾದರಿಗಳನ್ನು ಅಭಿವೃದ್ಧ್ದಿ ಪಡಿಸಲು ಸಕಲ ರೀತಿಯ ಸಹಕಾರವನ್ನು ಒದಗಿಸಿಕೊಡುವ ಬಗ್ಗೆ ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|| ಶಿವಪ್ರಕಾಶ್ ಎಂ, ಸಂಚಾಲಕರಾದ ಶ್ರೀ ಮುರಳಿಧರ ಕೆ, ಸದಸ್ಯರಾದ ಶ್ರೀ ಭರತ್ ಪೈ, ಶ್ರೀಮತಿ ವಸಂತಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ಕುಮಾರ್ ರೈ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಶ್ರೀ ಅಭಿಲಾಷ್ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ರೇಖಾ ಅವರು ಪೋಷಕರನ್ನು, ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಸಹಕರಿಸಿದ ಎಲ್ಲರಿಗೂ ಶ್ರೀಮತಿ ದೀಪ್ತಿ ಆರ್. ಭಟ್ ವಂದಿಸಿದರು.