ದಿನಾಂಕ 14-2-2020 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಇಸ್ಕಾನ್ ಕೃಷ್ಣ ಪ್ರಜ್ಞಾ ಪರೀಕ್ಷೆ ಮತ್ತು ಗೋಲೋಕ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಿತು.
ಉದ್ಘಾಟಕರಾಗಿ ಆಗಮಿಸಿದ ಇಸ್ಕಾನ್ “ಅಕ್ಷರ ಪಾತ್ರ” ಯೋಜನೆಯ ಮಂಗಳೂರು ವಿಭಾಗದ ಅಧ್ಯಕ್ಷರಾದ ಶ್ರೀ ಕಾರುಣ್ಯ ಸಾಗರದಾಸರು’ ನಮ್ಮ ಸುತ್ತುಮುತ್ತಲಿನ ವಾತಾವರಣದಲ್ಲಿ ನಾವು ಭಗವಂತನನ್ನು ಕಾಣಬೇಕು. ಆಗ ಜೀವನದ ಅಂತಿಮ ಲಕ್ಷ್ಯವಾದ ಮೋಕ್ಷವನ್ನು ಹೊಂದಲು ಸಾಧ್ಯ ಎಂದು ಹೇಳಿದರು.’
ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿವೇಕಾನಂದಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆ, ಸಂತ ವಿಕ್ಟರ್ ಶಾಲೆ ಮತ್ತು ಸರಸ್ವತಿ ವಿದ್ಯಾಮಂದಿರ ಪುರುಷರಕಟ್ಟೆ ಶಾಲೆಗಳ ವಿಜೇತ ಮಕ್ಕಳಿಗೆ ಹಾಗೂ ಶಾಲೆಗಳ ಸಂಯೋಜಕರಿಗೆ ಪ್ರಶಸ್ತಿ ಪತ್ರ, ಪದಕ, ಇಸ್ಕಾನ್ ಪ್ರಸಾದ ವಿತರಿಸಿ ಪುರಸ್ಕರಿಸಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಜಿಲ್ಲಾ ಮಟ್ಟದ ಆಲ್‌ರೌಂಡರ್ ಪ್ರಶಸ್ತಿಯು ಲಭಿಸಿದೆ.
ವೇದಿಕೆಯಲ್ಲಿ ಶಿಶು ಸಾಹಿತ್ಯ ಕವಿ ಶ್ರೀ ಉಲ್ಲಾಸಣ್ಣ, ಶಾಲಾ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಸುನೀತಾರವೀಂದ್ರ, ಪೂರ್ವ ಪ್ರಾಥಮಿಕ ವಿಭಾಗ ಮುಖ್ಯಸ್ಥೆ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಸತೀಶ್ ಕುಮಾರ್ ರೈ ಸ್ವಾಗತಿಸಿ, ಸಹಶಿಕ್ಷಕಿ ದಿವ್ಯರಾಣಿ ವಂದಿಸಿದರು. ಸಹಶಿಕ್ಷಕಿ ಸೌಮ್ಯ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪೂರ್ಣಿಮಾ ಕೆ. ಎಸ್. ವಿಜೇತರ ವಿವರ ನೀಡಿದರು.