ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆಯೋಜಿಸಿದ್ದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ನೇಹಾಭಟ್ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಪದೆದಿರುತ್ತಾರೆ. ಇವರು ರಚಿಸಿದ eco- friendly agri sprayer ಎಂಬ ಯಂತ್ರವು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದ್ದು ಅಂತಿಮ ಸುತ್ತಿನಲ್ಲಿ ತೃತೀಯ ಸ್ಥಾನ ಪದೆದಿರುತ್ತದೆ. ಪ್ರಶಸ್ತಿಯು ಮೂವತ್ತು ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಹೊಂದಿರುತ್ತದೆ.
ಇವರು 2019 ನವೆಂಬರ್ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ ಸಹಯೋಗದಲ್ಲಿ Campco Ltd ಮಂಗಳೂರು ನಿಯಮಿತ ಇವರ ಪ್ರಾಯೋಜಕತ್ವದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇದರ ಮಾರ್ಗದರ್ಶನಲ್ಲಿ ನಡೆದ ಅನ್ವೇಷಣಾ 2019 ಎಂಬ ರಾಜ್ಯ ಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ನಲ್ಲಿ ಭಾಗವಹಿಸಿ Mentorship ಪಡೆದಿರುವುದಲ್ಲದೆ ಕುಮಾರಿ ನೇಹಾ ಅವರ ತಂಡ 2019 ರ ಡಿಸೆಂಬರ್ ತಿಂಗಳಲ್ಲಿ ಕೇರಳದ ತಿರುವನಂತಪುರಂ ನಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಮೇಳದ ರಾಷ್ಟ್ರಮಟ್ಟದ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ è(Focaltheme:Science, Technology and innovation for a clean, green and healthy nation. Subtheme: Traditional knowledge system) ಕರ್ನಾಟಕ ರಾಜ್ಯವನ್ನು ಪ್ರತಿನಿದಿಸಿದ ಏಕೈಕ ತಂಡವಾಗಿರುತ್ತದೆ. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ A+ ಗ್ರೇಡ್ ಪಡೆದುಕೊಂಡ 19 ತಂಡಗಳಲ್ಲಿ ಒಂದಾಗಿರುತ್ತದೆ. ಇದಲ್ಲದೆ VIDYABHARATHI,INCEF ಹಾಗೂ Nxplorer ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಸಸ್ತಿ ಪಡೆದುಕೊಂಡಿರುತ್ತಾರೆ. ಈ ಎಲ್ಲಾ ಸಾಧನೆಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ವೃಂದದವರು ಮಾರ್ಗದರ್ಶನ ನೀಡಿರುತ್ತಾರೆ. ಕೋವಿಡ್-19 ಎಂಬ ಮಹಾಮಾರಿಯ ಪರಿಸ್ಥಿತಿಯಲ್ಲಿಯೂ ವಿದ್ಯಾರ್ಥಿಗಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧಕರಾಗಿ ಗುರುತಿಸುವಲ್ಲಿ ಅವರ ಶ್ರಮ ಹಾಗೂ ಮಾರ್ಗದರ್ಶನ ನೀಡಿರುವ ಅಧ್ಯಾಪಕರ ಪ್ರಯತ್ನ ಪ್ರಶಂಸನೀಯವಾಗಿರುತ್ತದೆ.
ಹಲವಾರು ವಿಜ್ಞಾನ ಮಾದರಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದ ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಎಪಿಎಂಸಿ ರಸ್ತೆಯಲ್ಲಿರುವ ವೆಲ್ತ್ ವಿಷನ್ ಹಾಗೂ ಹಾರ್ದಿಕ್ ಹರ್ಬಲ್ಸ್ನ ಮಾಲಕರಾದ ಶ್ರೀಯುತ ಮುರಳೀಧರ್.ಕೆ ಹಾಗೂ ಶ್ರೀಮತಿ ಮೀರಾ ಮುರಳಿ ದಂಪತಿಗಳ ಪುತ್ರಿ.