QR Code Business Card

ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಶ್ರಯ ಪಿ. ಆಯ್ಕೆ

ಪುತ್ತೂರು : ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಂಗಳೂರು ವತಿಯಿಂದ ನೀಡಲಾಗುವ 2020-21 ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಜಿಲ್ಲಾಮಟ್ಟದ ಅಸಾಧಾರಣ ಪ್ರಶಸ್ತಿಗೆ ಪ್ರಸ್ತುತ ವರ್ಷದಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಆಶ್ರಯ ಪಿ ಇವರು ಆಯ್ಕೆಯಾಗಿರುತ್ತಾರೆ.

ಅಸಾಧಾರಣ ಪ್ರಶಸ್ತಿ ಯೋಜನೆಯಡಿ ನಾವೀನ್ಯತೆ ತಾರ್ಕಿಕ ಸಾಧನೆ, ಕ್ರೀಡೆ ಕಲೆ ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದ್ದು ಪ್ರತೀ ಕ್ಷೇತ್ರದಲ್ಲಿ ಇಬ್ಬರಂತೆ ಒಟ್ಟು 8 ಮಕ್ಕಳಿಗೆ ತಲಾ 10,000/- ರಂತೆ ನಗದು ಹಾಗೂ ಪ್ರಶಸ್ತಿ ನೀಡಲಾಗುತ್ತದೆ.

2020-21 ನೇ ಸಾಲಿನಲ್ಲಿ ಮಂಗಳೂರು ನಗರದ 5 ವಿದ್ಯಾರ್ಥಿಗಳು, ಮಂಗಳೂರು ಗ್ರಾಮೀಣ ವಿಭಾಗದ 2 ವಿದ್ಯಾರ್ಥಿಗಳು ಹಾಗೂ ಪುತ್ತೂರು ತಾಲೂಕಿನ ಒಬ್ಬ ವಿದ್ಯಾರ್ಥಿನಿಯು ಆಯ್ಕೆಯಾಗಿರುತ್ತಾರೆ.

ಪುತ್ತೂರಿನಿಂದ ಆಯ್ಕೆಯಾದ ಆಶ್ರಯ ಇವಳು ಚೇತನಾ ಸ್ಟುಡಿಯೋ ಮಾಲಕರಾದ ಶ್ರೀ ಅಶೋಕ ಕುಂಬಳೆ ಮತ್ತು ಆಶ್ರಯ ಕೋಚಿಂಗ್ ಸೆಂಟರ್ ಮಾಲಕಿ ಶ್ರೀಮತಿ ಶೋಭಾ ಅಶೋಕ್ ಅವರ ಪುತ್ರಿ. ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿಯಾದ ಈಕೆ ಭರತನಾಟ್ಯ ಸೀನಿಯರ್ ಪರೀಕ್ಷೆ ತೇರ್ಗಡೆ ಹೊಂದಿದ್ದು ರಾಷ್ಟ್ರಪತಿ ಗೈಡ್ ಪ್ರಶಸ್ತಿ ಪುರಸ್ಕ್ರತೆ ಕಳೆದ ಶೈಕ್ಷಣಿಕ ವರ್ಷದ ಡಿಸೆಂಬರ್‌ನಲ್ಲಿ ತಿರುವನಂತಪುರದಲ್ಲಿ ನಡೆದ Children’s National Science Congress ನಲ್ಲಿ ಭಾಗವಹಿಸಿ ತನ್ನ ಅವಿಷ್ಕಾರಕ್ಕೆ A Grade ಪಡೆದುಕೊಂಡಿರುತ್ತಾಳೆ. ಈಕೆ ರಾಜ್ಯಮಟ್ಟದ ಕರಾಟೆ ಪಟು ಕೂಡಾ ಆಗಿರುತ್ತಾಳೆ.