QR Code Business Card

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸನ್ಮಾನ

ಮಗುವಿನ ಪ್ರತಿಭೆಯನ್ನು ಸಮಾಜ ಗುರುತಿಸಿ, ಗೌರವಿಸಿದಾಗ ಪೋಷಕರು ನಿಜವಾದ ಆನಂದವನ್ನು ಅನುಭವಿಸುತ್ತಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 2019-20 ನೇ ಸಾಲಿನಲ್ಲಿ ಶಿಕ್ಷಣ, ಕ್ರೀಡೆ, ವಿಜ್ಞಾನ, ಸ್ಕೌಟ್ಸ್ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡುತ್ತಿದ್ದರು.

ಶಾಲಾ ಹಂತದಲ್ಲಿ ಮಗುವಿನ ನೈಜ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವ ಗುರುಗಳೂ ಕೂಡ ಅಭಿನಂದನೆಗೆ ಅರ್ಹರು ಎಂದು ಅವರು ಹೇಳಿದರು. ಕಳೆದ ಸಾಲಿನ ಹತ್ತನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ 130 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ಸುಮಾರು 30 ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಎಂ. ಶಿವಪ್ರಕಾಶ್ ಶುಭ ಹಾರೈಸಿದರು. ಸದಸ್ಯರಾದ ಶ್ರೀ ಹರೇಕೃಷ್ಣ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಗೀತಾ.ಡಿ.ರೈ, ಉಪಾಧ್ಯಕ್ಷರಾದ ಡಾ. ಅಮೃತಾ ಪ್ರಸಾದ್ ಉಪಸ್ಥಿತರಿದ್ದರು.

ಸಂಚಾಲಕರಾದ ಶ್ರೀ ಮುರಳೀಧರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್‌ಕುಮಾರ್‌ ರೈ ವಂದಿಸಿದರು. ಶಿಕ್ಷಕರಾದ ಶ್ರೀ ರಾಧಾಕೃಷ್ಣ ರೈ, ವೆಂಕಟೇಶ್ ಪ್ರಸಾದ್, ಶ್ರೀಮತಿ ದೀಪ್ತಿ, ಕುಮಾರಿ ರಮ್ಯಾ ಸಾಧಕರ ವಿವರ ವಾಚಿಸಿದರು. ವಿದ್ಯಾರ್ಥಿಗಳ ಪರವಾಗಿ ಕುಮಾರಿ ಸ್ವೀಕೃತಾ ಕೆ. ಸಿ. ಹಾಗೂ ಪೋಷಕರ ಪರವಾಗಿ ಶ್ರೀರಾಮ್ ಪಾಟಾಜೆ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಕಿಯರಾದ ಶ್ರೀಮತಿ ಸಾಯಿಗೀತಾ ಎಸ್.ರಾವ್, ಶ್ರೀಮತಿ ಶಾಂತಿ ಹಾಗೂ ಶ್ರೀಮತಿ ಮಧುರಾಜೋಷಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಸಹಕರಿಸಿದರು.