QR Code Business Card

ಹನುಮಾನ್ ಚಾಲೀಸ ಪಠಣ ಅಭಿಯಾನಕ್ಕೆ ಚಾಲನೆ

ದಿನಾಂಕ 19-3-2021 ನೇ ಶುಕ್ರವಾರದಂದು ಒಡಿಯೂರು ಶ್ರೀಗಳ ಷಷ್ಠ್ಯಬ್ದಿ ಸಂಭ್ರಮ ಸಮಿತಿ 2021 ರ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ಇದರ ಸಹಯೋಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಹನುಮಾನ್ ಚಾಲೀಸ ಪಠಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶಾಲಾ ಚಿತ್ರಕಲಾ ಶಿಕ್ಷಕರು ರಚಿಸಿದಂತಹ ಶ್ರೀ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಅನಾವರಣಗೊಳಿಸಿ, ದೀಪ ಪ್ರಜ್ವಲನೆ ಮಾಡುವುದರ ಮೂಲಕ ನೇರವೇರಿಸಿ, ಆಶೀರ್ವಚನ ನೀಡಿದರು.

ಪೂಜ್ಯರು ಮಾತನಾಡಿ ಭಾರತ ಆತ್ಮನಿಷ್ಠ ಸಂಸ್ಕೃತಿಯನ್ನು ಹೇಳಿಕೊಟ್ಟಿದೆ. ಇದನ್ನು ತಿಳಿಯಲು ಒಮ್ಮೆ ಹನುಮಾನ್ ಚಾಲೀಸ ನೋಡಿದರೆ ಅದರ ಮಹತ್ವ ತಿಳಿಯುವುದು. ಹಾಗೆಯೇ ನಮ್ಮ ಭಾರತದ ಸಂಸ್ಕೃತಿಯನ್ನು ನಮ್ಮ ಮಹಾಕಾವ್ಯಗಳಲ್ಲಿ ನೋಡಿದರೆ ಅರ್ಥವಾಗುವುದು ಎಂದು ಹೇಳಿದರು. ನಂತರ ಹನುಮಾನ್ ಚಾಲೀಸ ಪುಸ್ತಕವನ್ನು ವಿದ್ಯಾರ್ಥಿಗಳ ಪರವಾಗಿ ತರಗತಿ ಅಧ್ಯಾಪಕರು ಸ್ವೀಕರಿಸಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಾಯೀ ಇವರಿಂದ ಹನುಮಾನ್ ಚಾಲೀಸ ಪಠಣ ನಡೆಯಿತು. ಜೊತೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಮೂಹಿಕವಾಗಿ ಪಠಣ ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಆವಿಷ್ಕಾರಗಳ ಬಗ್ಗೆ ಆಸಕ್ತಿಯನ್ನು ಸ್ಫುರಿಸಿ, ಬೆಳಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಸಮ್ಮೇಳನ – ಅನ್ವೇಷಣಾ-೨೦೧೯ ಇದರ ಸಾಕ್ಷ್ಯಚಿತ್ರವನ್ನು ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಗಳಾದ ಶ್ರೀ ಸುರೇಂದ್ರ ಕಿಣಿ ಶುಭ ಹಾರೈಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮುರಳೀಧರ ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಎಳೆಮನಸ್ಸುಗಳ ಮೂಲಕ ಪ್ರತಿ ಮನೆಯಲ್ಲಿ ಧರ್ಮಜಾಗೃತಿಯನ್ನು ಮೂಡಿಸುವ ಪ್ರಯತ್ನವಾಗಿ ಪರಮಪೂಜ್ಯರ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿಲಾಗಿದೆ ಎಂದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಎಂ. ಶಿವಪ್ರಕಾಶ್ ಇವರು ಶುಭ ಹಾರೈಸಿ, ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಸಿ, ಶಿಕ್ಷಕಿಯಾದ ಶ್ರೀಮತಿ ಸಾಯೀಗೀತಾ ಎಸ್. ರಾವ್ ಹಾಗೂ ಚಿತ್ರಕಲಾ ಶಿಕ್ಷಕರಾದ ಶ್ರೀ ಚೇತನ್ ಕೆ. ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ನಂತರ ಡಾ.ಎಸ್.ಪಿ. ಗುರುದಾಸ್, ಮಂಗಳೂರು ಇವರಿಂದ ’ಹನುಮದ್ವಿಲಾಸ’ ಹರಿಕಥಾ ಸತ್ಸಂಗ ಕಾರ್ಯಕ್ರಮ ನಡೆಯಿತು.