QR Code Business Card

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ : 3 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ದಿನಾಂಕ 23-03-2021 ರಂದು 28 ನೇ ದ. ಕ. ಜಿಲ್ಲಾಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ (N.C.S.C) – ’ಜಿಲ್ಲಾಮಟ್ಟದ ವಿಜ್ಞಾನ ಪ್ರಬಂಧ ಮಂಡನೆ’ ಸ್ಪರ್ಧೆಯು ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ, ನೆಲ್ಲಿಕಟ್ಟೆಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 10 ನೇ ತರಗತಿ ವಿದ್ಯಾರ್ಥಿಗಳಾದ ಆದ್ಯ ಸುಲೋಚನ ಮುಳಿಯ ಆದ್ಯ ಸುಲೋಚನಾ ಮುಳಿಯ (ಶ್ರೀ ಕೇಶವ ಪ್ರಸಾದ್ ಮುಳಿಯ ಮತ್ತು ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರ ಪುತ್ರಿ) ಮತ್ತು ವರ್ಷ ಕೆ. (ಶ್ರೀ ಅರವಿಂದ ಭಟ್ ಕೆ. ಮತ್ತು ಶ್ರೀಮತಿ ಶುಭಪ್ರದಾ ಇವರ ಪುತ್ರಿ), 9ನೇ ತರಗತಿ ವಿದ್ಯಾರ್ಥಿಗಳಾದ ತಮನ್.ಎಸ್.ಎನ್(ಶ್ರೀ ಸುರೇಂದ್ರ ಎ ಮತ್ತು ಶ್ರೀಮತಿ ನಳಿನ ಇವರ ಪುತ್ರ) ಮತ್ತು ಚಿರಾಗ್.ಎಂ.ಎನ್(ಶ್ರೀ ನಾರಾಯಣ ಎಂ ಮತ್ತು ಶ್ರೀಮತಿ ನಳಿನಿ ಎಂ ಎನ್ ಇವರ ಪುತ್ರ), ಆತ್ಮೀಯ.ಎಂ.ಕಶ್ಯಪ್ (ಶ್ರೀ ಮೋಹನ್ ಜಿ ಎಸ್ ಮತ್ತು ಶ್ರೀಮತಿ ಸೌಖ್ಯ ಎಂ ಎಸ್ ಇವರ ಪುತ್ರ) ಮತ್ತು ಶಿವಚೇತನ್ ಹಳಮನೆ (ಶ್ರೀ ಸೂರ್ಯ ಎಸ್.ಭಟ್ ಮತ್ತು ಶ್ರೀಮತಿ ಮಾಲತಿ ವೈ ಭಟ್ ಇವರ ಪುತ್ರ), ಪಂಕಜ್ ಭಟ್ (ಡಾ.ಮಹಾಲಿಂಗೇಶ್ವರ ಪ್ರಸಾದ್.ಎಸ್ ಮತ್ತು ಪವನ ಪ್ರಸಾದ್ ಇವರ ಪುತ್ರ) ಮತ್ತು ಧ್ರುವ.ಪಿ (ಡಾ. ಮೋಹನ್‌ದಾಸ್ ಎಸ್ ಪಿ ಮತ್ತು ಶ್ರೀಮತಿ ಆಶಾ ಎಂ ಇವರ ಪುತ್ರ)-ಸೀನಿಯರ್ ವಿಭಾಗ ಹಾಗೂ 8 ನೇ ತರಗತಿ ವಿದ್ಯಾರ್ಥಿಗಳಾದ ಧಾತ್ರಿ.ಸಿ.ಎಚ್ (ಶ್ರೀ ದಿನೇಶ್ ಸಿ ಹೆಚ್ ಮತ್ತು ಶ್ರೀಮತಿ ಪದ್ಮಲಕ್ಷ್ಮಿ ಇವರ ಪುತ್ರಿ) ಮತ್ತು ಕ್ಷಮ ವೈ (ಡಾ. ಮಹೇಶ್ ಕುಮಾರ್ ವೈ ಮತ್ತು ಶ್ರೀಮತಿ ಮಾಲಾ ಮಹೇಶ್ ವೈ ಇವರ ಪುತ್ರಿ) ಹಾಗೂ 6 ನೇ ತರಗತಿ ವಿದ್ಯಾರ್ಥಿಗಳಾದ ಚಿನ್ಮಯಿ ಎಲ್. (ಡಾ. ಎಲ್ ಕೃಷ್ಣಪ್ರಸಾದ್ ಮತ್ತು ಶ್ರೀಮತಿ ಅಮೃತಾ ಇವರ ಪುತ್ರಿ) ಮತ್ತು ವೇದ್ ವಿ. (ಶ್ರೀ ವಿಕಾಸ್ ಬಿ.ಎಂ ಮತ್ತು ಶ್ರೀಮತಿ ಶ್ವೇತಾ ವಿಕಾಸ್ ಇವರ ಪುತ್ರ) – ಜೂನಿಯರ್ ವಿಭಾಗ ಹೀಗೆ 6 ತಂಡಗಳು ಭಾಗವಹಿಸಿರುತ್ತವೆ.

ಜೂನಿಯರ್ ವಿಭಾಗದಲ್ಲಿ Cocoa Outer Shell Malt powder ಶೀರ್ಷಿಕೆಯಡಿ ಧಾತ್ರಿ.ಸಿ.ಎಚ್ ಮತ್ತು ಕ್ಷಮ ವೈ ಹಾಗೂ ಸೀನಿಯರ್ ವಿಭಾಗದಲ್ಲಿ Integrated Railway intact system. ಶೀರ್ಷಿಕೆಯಡಿ ಆದ್ಯ ಸುಲೋಚನ ಮುಳಿಯ ಮತ್ತು ವರ್ಷ.ಕೆ, ಮತ್ತು ISRAAS ಶೀರ್ಷಿಕೆಯಡಿ ತಮನ್.ಎಸ್.ಎನ್ ಮತ್ತು ಚಿರಾಗ್.ಎಂ.ಎನ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹೀಗೆ ಜಿಲ್ಲೆಯಿಂದ ಆಯ್ಕೆಯಾದ ಒಟ್ಟು 5 ತಂಡಗಳಲ್ಲಿ 3 ತಂಡಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳಾಗಿರುತ್ತಾರೆ.

ಶಾಲಾ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಎಲ್ಲಾ 6 ತಂಡಗಳ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡನೆ ಮಾಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ಸೀನಿಯರ್ ವಿಭಾಗ :

ಆದ್ಯ ಸುಲೋಚನಾ ಮುಳಿಯ

ವರ್ಷ ಕೆ.

ತಮನ್ ಎಸ್. ಎನ್.

ಚಿರಾಗ್ ಎಂ. ಎನ್.

ಆತ್ಮೀಯ ಎಂ. ಕಶ್ಯಪ್

ಶಿವಚೇತನ್ ಹಳಮನೆ

ಪಂಕಜ್ ಭಟ್

ಧ್ರುವ ಪಿ.

ಜೂನಿಯರ್ ವಿಭಾಗ :

ಧಾತ್ರಿ ಸಿ. ಎಚ್.

ಕ್ಷಮ ವೈ.

ಚಿನ್ಮಯಿ ಎಲ್.

ವೇದ್ ವಿ.