ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ 10 ದಿನಗಳ ಕಾಲ ನಡೆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ರೋಬೋಟಿಕ್ ಕಾರ್ಯಾಗಾರವು ಪ್ರಾಯೋಗಿಕ ಪ್ರದರ್ಶನದೊಂದಿಗೆ 19-3-2021 ನೇ ಶುಕ್ರವಾರದಂದು ಸಂಪನ್ನಗೊಂಡಿತು.
ಶಾಲೆಯಲ್ಲಿ ಸ್ಥಾಪಿತಗೊಂಡ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅಟಲ್ ಟಿಂಕರಿಂಗ್ ಲ್ಯಾಬ್ ವತಿಯಿಂದ ನಡೆಯುತ್ತಿರುವ ಈ ಕಾರ್ಯಾಗಾರದಲ್ಲಿ ವಿಶೇಷವಾಗಿ 8 ನೇ ತರಗತಿಯ ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಕೋನದಲ್ಲಿ ತಯಾರಿಸಿದ ರೊಬೋಟಿಕ್ ಮಾದರಿಗಳ ಪ್ರಾಯೋಗಿಕ ಪ್ರದರ್ಶನವನ್ನು ಪರಮ ಪೂಜ್ಯ ಶ್ರೀ ಶ್ರೀಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಗಾರದ ನೇತೃತ್ವವನ್ನು ವಹಿಸಿದ ಅಟಲ್ ಟಿಂಕರಿಂಗ್ ಲ್ಯಾಬ್‌ನ ಮುಖ್ಯಸ್ಥರಾದ ಶ್ರೀ ಶಿವಪ್ರಸಾದ್, ಮಾರ್ಗದರ್ಶಕರಾಗಿ ಸಹಕರಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ ವಿಭಾಗದ ಡಾ. ಮಹಂತೇಶ್ ಚೌಧರಿ – (ಅಸೋಸಿಯೇಟ್ ಪ್ರೊಫೆಸರ್), ಶ್ರೀ ವೆಂಕಟೇಶ್ – (ಏನ್ ಎ ಐ ಎನ್ ಪ್ರಾಜೆಕ್ಟ್ ಮ್ಯಾನೇಜರ್), ಇಲೆಕ್ಟ್ರಾನಿಕ್ ವಿಭಾಗದ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಶ್ರೀಮತಿ ಜೋವಿಟ ಲಾಸ್ಸರ್ಡೋ, ಶ್ರೀ ಗುರು ಸಂದೇಶ್, ಮೆಕ್ಯಾನಿಕಲ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀ ಸುದರ್ಶನ್ ಎಂ ಎಲ್, ಕಂಪ್ಯೂಟರ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀಮತಿ ರೂಪಾ ಜಿ ಕೆ , ಶ್ರೀಮತಿ ಸವಿತಾ ಎಂ, ಶ್ರೀಮತಿ ಭಾರತಿ ಕೆ. ಇವರುಗಳನ್ನು ಪರಮ ಪೂಜ್ಯ ಸ್ವಾಮೀಜಿಯವರು ಮಂತ್ರಾಕ್ಷತೆ ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಹರಸಿದರು.