ದಿನಾಂಕ 27.03.2021ನೇ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ “ಭಾರತ ದರ್ಶನ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಶಾಲಾ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಜಯಪ್ರಕಾಶ್.ಎಂ, ಪ್ರಾಂತ ಕಾರ್ಯವಾಹ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಇವರು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡಿಸಿದ. ನಾವಿಂದು ಭಾರತದರ್ಶನ ಮಾಡುವ ಎಂದರು. ಅನೇಕರು ಋಷಿಮುನಿಗಳ ಪಾದಸ್ಪರ್ಶದಿಂದ ಪವಿತ್ರವಾಗಿದೆ ಭಾರತ. ಈ ಭೂಭಾಗದ ಒಳಗಿರುವವರು ಎಲ್ಲರೂ ಭಾರತೀಯರು. 2000 ವರ್ಷಗಳಿಂದಲೂ ನಿರಂತರವಾಗಿ ಮುಂದುವರಿದಿರುವ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ. ಇದು ಸನಾತನ ನಿತ್ಯನೂತನ. ಭೂಮಿ ನಮ್ಮ ತಾಯಿ. ಜಡವಸ್ತುವಲ್ಲ ಭಾವನೆಯಿಂದ ಭಾರತದಲ್ಲಿ ಸಂಸ್ಕೃತಿ ಉಳಿದುಕೊಂಡಿದೆ. ಪ್ರತಿ ಜೀವಿಯು ಪಶುತ್ವದಿಂದ ಮಾನವತ್ವಕ್ಕೆ, ಮಾನವತ್ವದಿಂದ ದೈವತ್ವಕ್ಕೆ ಎರಬೇಕು.
ಭಾರತೀಯರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲಿಕ್ಕೆ ತಯಾರಾದರೂ ಕಾರಣ ಏನೆಂದರೆ ನಮ್ಮ ಸಂಸ್ಕೃತಿ. ಭಾರತ ತ್ಯಾಗಭೂಮಿ, ಯೋಗ ಭೂಮಿ, ಕರ್ಮಭೂಮಿ. ಭಾರತದ ಭೌಗೋಳಿಕ ಭಾಗವು ಎಲ್ಲವೂ ಪವಿತ್ರ. ಸಂಸ್ಕೃತವು ಎಲ್ಲಾ ಭಾಷೆಗಳ ಮೂಲ ಎನ್ನುವ ಮಾತುಗಳನ್ನಾಡಿದರು. ಅನೇಕತೆಯಲ್ಲಿ ಏಕತೆಯನ್ನು ತೋರಿಸಿದ ದೇಶವೇ ನಮ್ಮ ಭಾರತ ಎನ್ನುವ ನುಡಿಯನ್ನು ನುಡಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಡಾ. ಶಿವಪ್ರಕಾಶ್, ಸಂಚಾಲಕರಾದ ಶ್ರೀ ಮುರಳೀಧರ ಕೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ.ಕೃಷ್ಣ ಭಟ್ ಹಾಗೂ ಮುಖ್ಯಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿ, ಸಹಶಿಕ್ಷಕಿ ಕವಿತಾ ಸ್ವಾಗತಿಸಿದರು. ಸಹಶಿಕ್ಷಕ ರಾಧಾಕೃಷ್ಣ ರೈ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿಗಳು ಪಂಚಾಂಗ, ಶುಭಾಷಿತ, ಅಮೃತವಚನಗಳನ್ನು ವಾಚಿಸಿದರು. ಸಹಶಿಕ್ಷಕಿ ಶ್ರೀಮತಿ ಅನುರಾಧ, ಸಹಶಿಕ್ಷಕ ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಅಮೋಘ ಶಂಕರ್ ಹಾಗೂ ಅಭಿರಾಮ್ ದೇಶಭಕ್ತಿ ಗೀತೆಗಳನ್ನು ಹಾಡಿದರು. ಸಹಶಿಕ್ಷಕಿ ದಿವ್ಯರಾಣಿ ವಂದನಾರ್ಪಣೆಗೈದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಸಹಕರಿಸಿದರು.