ಪುತ್ತೂರು : 2020-21 ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ಕಬ್ಸ್ ಚತುರ್ಥ ಚರಣ ಪರೀಕ್ಷಾ ಶಿಬಿರದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 11 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಪ್ರಸ್ತುತ 5 ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀರಾಮ.ಎಂ (ಶಾಲಾ ಸಂಚಾಲಕರು ಹಾಗೂ ವೆಲ್ತ್ ವಿಷನ್ ಪುತ್ತೂರು ಇದರ ಮಾಲಕರು ಶ್ರೀ ಮುರಳೀಧರ.ಕೆ ಹಾಗೂ ಮೀರಾ ಮುರಳಿ ದಂಪತಿ ಪುತ್ರ), ಕೃತಿಕ್.ಆರ್ (ನೇರಳಕಟ್ಟೆಯ ಸ್ವ ಉದ್ಯೋಗಿ ರಾಜೇಶ್ ಎನ್ ಹಾಗೂ ನಮ್ಮ ಪ್ರೌಢಶಾಲಾ ಶಿಕ್ಷಕಿ ರೇಖಾ ಆರ್ ದಂಪತಿ ಪುತ್ರ) ಎಂ. ವೈಭವ್ ಕಾಮತ್( ಪುತ್ತೂರಿನ ಓಂಪ್ರಕಾಶ್ ಹೋಟೆಲ್ ಮಾಲಕ ಎಂ. ವಿದ್ಯಾಧರ ಕಾಮತ್ ಹಾಗೂ ಮುಕ್ತಾ ಕಾಮತ್ ದಂಪತಿ ಪುತ್ರ). ಹರ್ಷಿನ್.ವೈ(ಕೃಷಿಕ ದೇವಪ್ಪಗೌಡ .ವೈ ಹಾಗೂ ಕುಸುಮಾ ದಂಪತಿ ಪುತ್ರ) ಆಯುಷ್ ಕೆ. ಮತ್ತು ಆರುಷ್. ಕೆ (ಕೃಷಿಕ ಶಿವಪ್ರಕಾಶ್ ಕೆ ಹಾಗೂ ಮಂಜುಶ್ರೀ ದಂಪತಿ ಪುತ್ರರು). ಚಂದನ್.ಎಂ (ಕೃಷಿಕ ಶಾಂತಾರಾಮ ನಾಯಕ್ ಹಾಗೂ ಕಾಂತಿಮಣಿ ದಂಪತಿ ಪುತ್ರ). ಧನುಷ್ .ಪಿ.ಡಿ (ಕೃಷಿಕ ಧರ್ಣಪ್ಪ ಗೌಡ.ಪಿ ಹಾಗೂ ಮಮತಾ.ಪಿ ದಂಪತಿ ಪುತ್ರ) ರವಿನಾರಾಯಣ ಭಟ್.ಎಸ್ (ಕೆ.ಎಸ್.ಆರ್ .ಟಿ.ಸಿ ಸೂಪರಿಂಟೆಂಡೆಂಟ್ ಗುರು ರಾಘವೇಂದ್ರ ಭಟ್ ಹಾಗೂ ಶಿಕ್ಷಕಿ ಲಲಿತಾಲಕ್ಷ್ಮಿ.ಜಿ. ಭಟ್ ದಂಪತಿ ಪುತ್ರ ). ಹವಿನ್ ಎಚ್.ಆರ್. (ಕೆ.ಎಸ್.ಆರ್. ಟಿ .ಸಿ ಉದ್ಯೋಗಿ ರಾಧಾಕೃಷ್ಣ ಗೌಡ.ಪಿ ಹಾಗೂ ತಿರುಮಲೇಶ್ವರಿ. ಆರ್ ದಂಪತಿ ಪುತ್ರ). ಶುಭನ್. ಪಿ.ಕೆ( ಪುತ್ತೂರಿನ ಸ್ನೇಹ ಜೆರಾಕ್ಸ್ ಮಾಲಕ ಪದ್ಮನಾಭ ಹಾಗೂ ರೇಖಾ ಪಿ ನಾಯ್ಕ್ ದಂಪತಿ ಪುತ್ರ) ಇವರು ಉತ್ತೀರ್ಣರಾಗಿದ್ದಾರೆ .ಇವರಿಗೆ ಲೇಡಿ ಕಬ್ ಮಾಸ್ಟರ್‍ಸ್ ಪುಷ್ಪಲತಾ .ಕೆ ಹಾಗೂ ರಮ್ಯರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯಗುರು ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.