Vivekananda English medium School, Tenkila, Puttur, in association with Vivekananda College of Engineering and Technology Puttur and Vivekananda Polytechnic Puttur has started ‘Code Club’ -Online Coding Classes- sponsored by ‘Atal Tinkering Lab’ for the students of class V to class IX.
The Club has inaugurated on 09 August 2021, in the auditorium of the School. Dr. Mahesh Prasanna K the Principal of Vivekananada college of Engineering and Technology has inaugurated the program and said that it’s our attitude that makes the difference. He has blessed and motivated the students that they should find interest in the work they do. Dr. Mahanthesh Chowdhury, Associate Professor, Vivekananda College of Engineering and Technology, the guest of honor said that as students pass from one class to another they need to inculcate the life skills inaccordance with future needs. Dr. Shivaprakash M, President of the School Governing Council, presided over the Program. Smt. UshaKiran S M, Selection Grade Lecturer, Vivekananda Polytechnic Puttur, Head Master of the school Sri Sathish Kumar Raiwere present on the dais. Smt. UshaKiran S M has imparted the knowledge of ‘C-programming’ to the students during the first session. These sessions are totally free of cost for the students of the school. The Headmaster said, “Classes on graphic designing, game developing, rubik’s cube, and mobile app developing are going to be conducted through online in the upcoming days”.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್ ವತಿಯಿಂದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಇದರ ಸಹಯೋಗದೊಂದಿಗೆ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಕೋಡಿಂಗ್ ತರಬೇತಿಯ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಶ್ ಪ್ರಸನ್ನ ಇವರು ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ಅನುಗುಣವಾಗುವ ಜೀವನ ಕೌಶಲ್ಯಗಳನ್ನು ರೂಢಿಸಿಕೊಂಡು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಶುಭಹಾರೈಸಿದರು.
ಇನ್ನೋರ್ವ ಅತಿಥಿಗಳಾದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದ ಡಾ.ಮಹಂತೇಶ್ ಚೌಧರಿಯವರು ಮಾತನಾಡಿ ಒಂದು ಶಾಲಾ ತರಗತಿಯಿಂದ ಮುಂದಿನ ತರಗತಿಗೆ ಮುಂಬಡ್ತಿ ಹೊಂದುವಾಗ ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳು ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಹರಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ, ವಿವೇಕಾನಂದ ಪಾಲಿಟೆಕ್ನಿಕ್‌ನ ಉಪನ್ಯಾಸಕಿಯಾದ ಶ್ರೀಮತಿ ಉಷಾ ಕಿರಣ ಇವರು ಉಪಸ್ಥಿತರಿದ್ದರು. ಮೊದಲ ದಿನದ ತರಬೇತಿಯನ್ನು ಶ್ರೀಮತಿ ಉಷಾ ಕಿರಣ ಇವರು ನಡೆಸಿಕೊಟ್ಟರು ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಫಿಕ್ ಡಿಸೈನ್, ಮೊಬೈಲ್ ಆಪ್ ಡೆವಲಪಿಂಗ್ ಹಾಗೂ ಇನ್ನಿತರ ತರಬೇತಿಗಳು ಆನ್ಲೈನ್ ಮುಖಾಂತರ ನಡೆಯಲಿವೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.