ಗಾಂಧೀಜಿಯವರು ಸದಾಚಿರಂಜೀವಿಗಳು, ಪ್ರತಿವರ್ಷ ಅವರ ಜನ್ಮದಿನವನ್ನು ಆಚರಿಸುವ ಮೂಲಕ ಚಿರಂಜೀವಿಯಾಗಿದ್ದಾರೆ. ವಿವೇಕಾನಂದರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಗಾಂಧೀಜಿಯವರು ಮಾತ್ರ ಎಂದು ಹಿರಿಯ ಸಾಹಿತಿ, ಬರಹಗಾರ ಶ್ರೀ ಲಕ್ಷೀಶ ತೋಳ್ಪಾಡಿ ಹೇಳಿದರು.
ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಸಭಾಂಗಣದಲ್ಲಿ ಜರುಗಿದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿಯ ಆಚರಣೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಗಾಂಧೀಜಿಯವರು ಮಾನವನ ದುರ್ಬಲತೆ ಹೋಗಲಾಡಿಸಬೇಕಾದರೆ ಮನೋಬಲ ಗಟ್ಟಿಯಾಗಿರಬೇಕು, ಯಾವ ವ್ಯಕ್ತಿಗೆ ಇನ್ನೊಬ್ಬರ ನೋವು ಅರ್ಥ ಆಗ್ತದೆ ಅವನು ನಿಜವಾದ ವೈಭವ. ಗಾಂಧೀಜಿಗೆ ಹತ್ತಿಯ ಹೂ ಅಂದರೆ ಬಹಳ ಇಷ್ಟ ಯಾಕೆಂದರೆ ಅದರಿಂದ ನೂಲು ತಯಾರಿಸಬಹುದು, ನೂಲಿನಿಂದ ಬಟ್ಟೆ ಮಾಡಬಹುದು, ಆ ಮೂಲಕ ನಮ್ಮ ಬಟ್ಟೆ ಯನ್ನು ನಾವೇ ತಯಾರಿಸ ಬಹುದು ಎನ್ನುವುದು ಅವರ ಹಂಬಲವಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪುಷ್ಪಲತಾ ಬಿ.ಕೆ, ಗಾಂಧೀಜಿಯವರ ಆದರ್ಶ, ಮನೋಬಲಗಳು ಇಂದಿನ ಮಕ್ಕಳಿಗೆ ದಾರಿದೀಪವಾಗಿದೆ. ಅದೇ ರೀತಿ ಶಾಸ್ತ್ರೀಜಿಯವರ ಸರಳ ಜೀವನ, ಉತ್ತಮ ಆಡಳಿತ ನೀತಿ ದೇಶದ ಜನರನ್ನು ಜಾಗೃತರಾಗುವಂತೆ ಮಾಡಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಕರಾದ ಶ್ರೀ ರಾಧಾಕೃಷ್ಣ ರೈ, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಭಾಸ್ಕರ್ ಗೌಡ, ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಕೆ. ಜಿ. ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ಮಮತ ಬಿ. ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ವಂದಿಸಿ, ಶಿಕ್ಷಕಿಯರಾದ ಶ್ರೀಮತಿ ಶಿಲ್ಪಾ ರೈ ಹಾಗೂ ಶ್ರೀಮತಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ವೈಷ್ಣವ ಜನತೋ ಹಾಗೂ ನಮೋ ನಮೋ ಭಾರತಾಂಬೆ ದೇಶಭಕ್ತಿಗೀತೆಗಳನ್ನು ಹಾಡಿದರು.