QR Code Business Card

ವಿದ್ಯಾರ್ಥಿ ನಾಯಕರ ಆಯ್ಕೆ

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಮತದಾನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಹಕ್ಕು ಚಲಾಯಿಸಿ, 10 ನೇ ತರಗತಿಯ ಆತ್ಮೀಯ ಕಶ್ಯಪ್‌ನನ್ನು ವಿದ್ಯಾರ್ಥಿ ನಾಯಕನಾಗಿಯೂ, 10 ನೇ ತರಗತಿಯ ಕುಮಾರಿ ಇಂದುಶ್ರೀಯನ್ನು ಉಪನಾಯಕಿಯಾಗಿ ಆಯ್ಕೆ ಮಾಡಿದರು. ವಿರೋಧ ಪಕ್ಷದ ನಾಯಕನಾಗಿ 10 ನೇ ತರಗತಿಯ ಚಿನ್ಮಯಕೃಷ್ಣ ಹಾಗೂ ಉಪನಾಯಕನಾಗಿ ಅಭಯ್ ಎಸ್. ರಾವ್, ಕ್ರೀಡಾ ಕಾರ್ಯದರ್ಶಿಯಾಗಿ ಕು. ಅನಘಾ ಕೆ. ಎ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕು. ಮೇಘ ನಾಯಕ್‌ ಆಯ್ಕೆಗೊಂಡರು. ಶಾಲಾ ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಶಾಲೆಯ ಶಿಕ್ಷಕರು ನಡೆಸಿಕೊಟ್ಟರು.