INSEF Science Society of India ನಡೆಸುವ Regional Science Fair ಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ 4 ಪ್ರಾಜೆಕ್ಟ್‌ಗಳು ಆಯ್ಕೆಯಾಗಿವೆ. ಇದರಲ್ಲಿ 10ನೇ ತರಗತಿಯ ತಮನ್. ಎಸ್. ಎನ್ ಮತ್ತು ಚಿರಾಗ್. ಎಂ. ಎನ್ ಇವರ ʻ[Israas] Indian Space Research And Army Security- Satellite’, 9 ನೇ ತರಗತಿಯ ಪೃಥ್ವಿರಾಜ್ ಪಿ. ಪ್ರಭು ಇವರ ‘Dwiprathi Two Lane Fully Automatic Seeding Machine’, 9 ನೇ ತರಗತಿಯ ಅನ್ವಿತ್ ಎನ್. ಇವರ’ herbal spray from weed, Wedeliatrilobata to repell household vegetable pests’, 8 ನೇ ತರಗತಿಯ ಸಾನ್ವಿಎಸ್. ಪಿ. ಮತ್ತು ಜಿ ಪ್ರತೀಕ್ಷಾ ಆಳ್ವ ಇವರ‘Multipurpose agricultural solar dryer’, ಪ್ರಾಜೆಕ್ಟ್‌ಗಳು ಆಯ್ಕೆಗೊಂಡಿವೆ. ಇವರಿಗೆ ವಿಜ್ಞಾನ ವಿಭಾಗದ ಶಿಕ್ಷಕರುಗಳಾದ ರಾಜಶೇಖರ್, ರೇಖಾ ಆರ್, ದೀಪ್ತಿ, ಅನರ್ಘ್ಯ, ಶಿವಪ್ರಸಾದ್ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.