ದಿನಾಂಕ 1-12-2021 ನೇ ಬುಧವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಯಾದವಶ್ರೀ ಸಭಾಂಗಣದಲ್ಲಿ ಫಿಟ್ ಇಂಡಿಯಾ ಸಪ್ತಾಹವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯೆ ಡಾ. ಅಮೃತ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಮಾಡಿದ ಇಂಥ ಯೋಜನೆ ಶ್ಲಾಘನೀಯ ಎಂದು ಹೇಳಿದರು.
ನಂತರ ಮಾತನಾಡಿದ ಶಾಲಾ ಸಂಚಾಲಕರಾದ ಶ್ರೀ ರವಿನಾರಾಯಣರವರು ಮಕ್ಕಳ ಮಾನಸಿಕ, ದೈಹಿಕ ಕ್ಷಮತೆಗೆ ಫಿಟ್ ಇಂಡಿಯಾ ಸಪ್ತಾಹ ಮಹತ್ವ ಪೂರ್ಣವಾದುದು. ಮಕ್ಕಳನ್ನು ಕೊರೋನದ ಸಂಧಿಗ್ದ ಪರಿಸ್ಥಿತಿಯಲ್ಲೂ ಸದೃಢ ರನ್ನಾಗಿಸುವ ಕಲ್ಪನೆ ಉತ್ತಮವಾದುದು ಎಂದು ಹೇಳಿದರು. ಅನಂತರ ಸುಮಾರು ೯೦೦ ವಿದ್ಯಾರ್ಥಿಗಳಿಂದ ನಾನಾ ದೈಹಿಕ ವ್ಯಾಯಾಮಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ಮತ್ತು ಶಿಕ್ಷೆಕೇತರ ವೃಂದ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ದೈಹಿಕ ಶಿಕ್ಷಕಿ ಶ್ರೀಮತಿ ಆಶಾ ಸ್ವಾಗತಿಸಿ, ದೈಹಿಕ ಶಿಕ್ಷಕಿ ಶ್ರೀಮತಿ ನಮಿತಾ ವಂದಿಸಿ, ದೈಹಿಕ ಶಿಕ್ಷಕಿ ಕು. ರಶ್ಮಿ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಭಾಸ್ಕರ್ ಗೌಡ, ಗಿರೀಶ್ ಕಣಿಯಾರು, ದೀಪಕ್, ವಾಣಿಶ್ರೀ ಮತ್ತು ಪವನ್ ಸಹಕರಿಸಿದರು.