QR Code Business Card

“ಕಲೋತ್ಸವ-2021″ರಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತೇಜ ಚಿನ್ಮಯ ಹೊಳ್ಳ

ಶಾಲಾ ಶಿಕ್ಷಣ ಸಚಿವಾಲಯ, ಭಾರತ ಸರಕಾರ, ಹಾಗೂ ಎನ್.ಸಿ.ಇ.ಆರ್.ಟಿ ನವದೆಹಲಿಯವರು ನಡೆಸಿದ “ಕಲೋತ್ಸವ-2021″ರಲ್ಲಿ ಕುಮಾರ ತೇಜ ಚಿನ್ಮಯ ಹೊಳ್ಳ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಭಾರತ ಸರಕಾರದ ಶಾಲಾ ಶಿಕ್ಷಣ ಸಚಿವಾಲಯವು 9 ನೇ ತರಗತಿಯಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸಂಗೀತ, ನಾಟ್ಯ, ಮುಂತಾದ ವಿವಿಧ ಕಲಾ ಪ್ರಕಾರಗಳ ಪ್ರತಿಭೆಗಳ ಅನಾವರಣಕ್ಕಾಗಿ ಈ ರೀತಿಯ ಸ್ಪರ್ಧೆಗಳನ್ನು ಶಾಲಾ ಹಂತದಿಂದ ರಾಷ್ಟ್ರಮಟ್ಟದ ತನಕ ನಡೆಸುತ್ತಿದೆ. ಈ ವರ್ಷ ಈ ಸ್ಪರ್ಧೆಗಳನ್ನು Online  ಮೂಲಕ ನಡೆಸಲಾಗಿದೆ.

ಇವನು ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಪುತ್ತೂರು ನಿವಾಸಿ ಶ್ರೀ ಹರೀಶ್ ಹೊಳ್ಳ ಮತ್ತು ವಿದುಷಿ ಶ್ರೀಮತಿ ಸುಚಿತ್ರಾ ಹೊಳ್ಳ ದಂಪತಿಗಳ ಪುತ್ರ ಹಾಗೂ ವಿದ್ವಾನ್ ಟಿ.ಜಿ.ಗೋಪಾಲಕೃಷ್ಣನ್  ಮಂಗಳೂರು ಅವರ ಶಿಷ್ಯನಾಗಿದ್ದು, ಈ ಸ್ಪರ್ಧೆಯಲ್ಲಿ ವಯಲಿನ್‌ನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಹಕರಿಸಿದ್ದಳು ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.