QR Code Business Card

ಹುತಾತ್ಮ ಯೋಧರಿಗೆ ನಮನ

ಡಿಸೆಂಬರ್ 11 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಯಾದವಶ್ರೀ ಸಭಾಂಗಣದಲ್ಲಿ ಡಿಸೆಂಬರ್ 8 ರಂದು ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ದೇಶ ಕಂಡ ಅಪ್ರತಿಮ ಸೇನಾನಿ ಜನರಲ್ ಬಿಪಿನ್ ರಾವತ್ ಹಾಗು ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಶಿಕ್ಷಕಿ ಶ್ರೀಮತಿ ಪುಷ್ಪಲತಾ ಬಿ. ಕೆ. ಅವರು “ದೇಶದ ಸೇವೆಯೇ ಈಶ ಸೇವೆ ಎನ್ನುವಂತೆ ದೇಶಕ್ಕಾಗಿ ಸೇವೆ ಸಲ್ಲಿಸಿದ ಈ ಯೋಧರ ನೆನಪು ಸದಾ ಅಮರವಾಗಲಿ. ತಮ್ಮ ಜೀವನವನ್ನೇ ಭಾರತ ಮಾತೆಗೋಸ್ಕರ ಮೂಡಿಪಾಗಿಟ್ಟ ಬಿಪಿನ್ ರಾವತ್ ಅವರಂತ ಯೋಧರನ್ನು ಕಳಕೊಂಡದ್ದು ಭಾರತ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಆ ದೇವರು ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ” ಎಂದು ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು.

ವೇದಿಕೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ದೇಶಭಕ್ತಿಗೀತೆಗಳನ್ನು ಹಾಡುವುದರ ಮೂಲಕ ಹುತಾತ್ಮರಿಗೆ ಗೌರವ ನಮನಗಳನ್ನು ಸಮರ್ಪಿಸಿದರು. ವಿದ್ಯಾರ್ಥಿಗಳ ಸ್ವರಾಂಜಲಿ ಸಮರ್ಪಣೆಯ ಧ್ವನಿಯೊಂದಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ಕಾರ್ತಿಕ್ ಕುಮಾರ್ ಅವರು ವೇದಿಕೆಯಲ್ಲಿಯೇ ವೀರ ಸೇನಾನಿ ಬಿಪಿನ್ ರಾವತ್‌ರವರ ಭಾವಚಿತ್ರವನ್ನು ಚಿತ್ರಿಸಿದರು. ಶಿಕ್ಷಕಿಯರು ದೇಶಪ್ರೇಮವನ್ನು ಸ್ಫುರಿಸುವ ದೇಶಭಕ್ತಿಗೀತೆಯನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿ ವೃಂದ ಮಡಿದ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿದರು.

ಹಿರಿಯ ಶಿಕ್ಷಕಿ ಶ್ರೀಮತಿ ಸಾಯಿಗೀತಾರವರು ಕಾರ್ಯಕ್ರಮ ನಿರೂಪಿಸಿದರು.