ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಿಗೆ ಎರಡು ದಿನದ ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ತರಗತಿ ನಿರ್ವಹಣಾ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಮರೋಪ ಸಮಾರಂಭವು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಶ್ರೀರಾಮ ಸಭಾ ಭವನದಲ್ಲಿ ಡಿಸೆಂಬರ್ 18 ರಂದು ನಡೆಯಿತು.
ಸಮರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೆ.ಎಂ.ಕೃಷ್ಣ ಭಟ್ ವಹಿಸಿ, ಮಾತನಾಡಿ, ಬದುಕನ್ನು ತುಂಬಿಸುವವರು ಕೃಷಿಕ ಮತ್ತು ಶಿಕ್ಷಕ. ಜಗತ್ತಿನಲ್ಲಿ ಯಾವುದೇ ಘಟನೆಗಳು ನಡೆಯುತ್ತಿದ್ದರು, ಅದಾವುದನ್ನು ಲೆಕ್ಕಿಸದೆ ಜನ ಜೀವನದ ಜೀವಾನಾಡಿಯಾದ ಆಹಾರದ ಉತ್ಪಾದನೆಯನ್ನು ಮಾಡುವ ಕೃಷಿಕ ನಿರಂತರ ಕಾರ್ಯ ಪ್ರವೃತ್ತನಾಗಿರಬೇಕಾಗಿರುತ್ತದೆ. ಅದೇ ರೀತಿ ಭವ್ಯ ಭವಿಷ್ಯದ ಸಾಕಾರಕ್ಕಾಗಿ ವಿದ್ಯಾರ್ಥಿ ಸಮೂಹದಲ್ಲಿ ಜ್ಞಾನದ ಹಸಿವನ್ನು ನೀಗಿಸುವ ಪ್ರಯತ್ನವನ್ನು ಶಿಕ್ಷಕ-ಸಮೂಹ ನಿರಂತರವಾಗಿ ಮಾಡುತ್ತಿರುತ್ತದೆ.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪರವಾಗಿ ಮಾತನಾಡಿದ ಆಡಳಿತ ಮಂಡಳಿಯ ಸದಸ್ಯ ಜೆ.ಸಿ. ಶ್ರೀ ಕೃಷ್ಣಮೋಹನ ಅವರು ಪ್ರಸ್ತುತ ದಿನಗಳಲ್ಲಿ ಹಲವು ಜಾಲೆಂಜ್‌ಗಳನ್ನು ತರಗತಿಯಲ್ಲಿ ಅಧ್ಯಾಪಕರು ಎದುರಿಸಬೇಕಾಗುತ್ತದೆ, ಅಂತಹ ಜಾಲೆಂಜ್‌ಗಳನ್ನು ಎದುರಿಸಲು ಶಿಕ್ಷಕ ಸಮೂಹ ಸದಾ ಅಪ್‌ಡೇಟ್ ಆಗುತ್ತಾ ಇರಬೇಕು. ಅದಕ್ಕಾಗಿ ಇಂತಹ ಕಾರ್ಯಗಾರಗಳು ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಮುಖ್ಯ ತರಬೇತುದಾರರಾದ ಡಾ.ಸೆಂಥಿಲ್ ಕುಮಾರ್.ಜಿರವರು ಮಾತನಾಡಿ ತರಬೇತಿಯಲ್ಲಿ ಹಲವು ವಿಚಾರಗಳನ್ನು ವ್ಯಕ್ತಪಡಿಸಿದ್ದು, ಅವುಗಳನ್ನು ಎಲ್ಲಾ ತಮ್ಮಲ್ಲಿ ಅಳವಡಿಸಲಾಗುವುದು ಎಂದು ಹೇಳಲು ಸಾಧ್ಯವಿಲ್ಲ, ಆದರೆ ಪ್ರಸ್ತುತ ಸ್ವರ್ಧಾತ್ಮಕ ಜಗತ್ತಿನಲ್ಲಿ ರೋಬೊಟ್‌ಗಳು ಹೊಸ ರೋಬೊಟ್‌ಗಳನ್ನು ಸೃಷ್ಟಿಸುವ ಕಾಲವಾಗಿದ್ದು, ಅವುಗಳ ಜೊತೆಯಲ್ಲಿ ನಾವು ಮಾನವತೆಯನ್ನು ಅರಿತು ಬದುಕಬೇಕಾದ ಸನ್ನಿವೇಶ ಒದಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ರವಿನಾರಾಯಣ ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.
ಶ್ರೀಮತಿ ಪ್ರತಿಮಾ ಸ್ವಾಗತಿಸಿ, ಶಿಕ್ಷಕಿಯರಾದ ಶ್ರೀಮತಿ ರೇಖಾ, ಶ್ರೀಮತಿ ಆಶಾ.ಕೆ, ಶ್ರೀಮತಿ ಅಶ್ವಿನಿ ಜೋಶಿ ಹಾಗೂ ಶಿಕ್ಷಕ ರಾಜೇಶ್ ಉಪಾಧ್ಯಾಯ ಅನಿಸಿಕೆ ವ್ಯಕ್ತ ಪಡಿಸಿ, ಶಿಕ್ಷಕಿ ಕವಿತಾ.ಕೆ.ಜಿ ವಂದಿಸಿ, ಶಿಕ್ಷಕರಾದ ಶ್ರೀ ರಾಧಕೃಷ್ಣ ರೈ ಮತ್ತು ಶ್ರೀಮತಿ ಅನುರಾಧ ಕಾರ್ಯಕ್ರಮ ನಿರೂಪಿಸಿದರು.