QR Code Business Card

3 ವಿದ್ಯಾರ್ಥಿಗಳು Inspire Award ಸ್ಪರ್ಧೆಯಲ್ಲಿ ಆಯ್ಕೆ

ಭಾರತ ಸರಕಾರದ ಅಧೀನದಲ್ಲಿರುವ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗ ಸಂಸ್ಥೆ ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಗತಿಗೋಸ್ಕರ ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಲು ಇನ್‌ಸ್ಪಾಯರ್ [Inspire Award] ಸ್ಪರ್ಧೆಯನ್ನು ಆಯೋಜಿಸಿತ್ತು. ಪ್ರತಿ ಬಾರಿಯಂತೆ ನಮ್ಮ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಈ ಬಾರಿಯು ಸಹ ಸದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅವರಲ್ಲಿ ಮೂರು ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ.

9ನೇ ತರಗತಿಯ ವಸುಧಾ.ಎಂ (ಶ್ರೀ ಕೃಷ್ಣಮೂರ್ತಿ ಹಾಗೂ ಶ್ರೀಮತಿ ಶ್ವೇತಾ ಸರಸ್ವತಿ ದಂಪತಿಯ ಪುತ್ರಿ.) ಆವಿಷ್ಕರಿಸಿವ ಕಂಪ್ಯೂಟರ್ “CHUNKKEY” App” ಆ್ಯಪ್, ಆಯ್ಕೆಗೊಂಡಿರುತ್ತದೆ. ಈ “CHUNKKEY” App” ವಾಕ್ ಸಮಸ್ಯೆಗಳಿರುವ ವಿಶಿಷ್ಟ ಚೇತನ ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ಸಹಾಯವಾಗಲಿದೆ.

10ನೇ ತರಗತಿಯ ತಮನ್.ಎಸ್.ಎನ್ (ಶ್ರೀ ಸುರೇಂದ್ರ ಎ. ಹಾಗೂ ಶ್ರೀಮತಿ ನಳಿನ ಕುಮಾರಿ ದಂಪತಿ ಪುತ್ರ) ಆವಿಷ್ಕರಿಸಿದ “Indian Space Research and Army Security-ISRAS” ಎಂಬ ವಿಜ್ಞಾನ ಮಾದರಿಯ ಆಯ್ಕೆಯಾಗಿರುತ್ತದೆ. ಈ ಮಾದರಿ ಕೃಷಿ ಕ್ಷೇತ್ರದಲ್ಲಿ ಮಣ್ಣಿನ ತೇವಾಂಶದ ಮಟ್ಟವನ್ನು ಕಾಪಾಡುವಲ್ಲಿ ಹಾಗೂ ಕೃಷಿ ಬೆಳೆಗಳಲ್ಲಿ ರೋಗ ಬಾಧೆಯನ್ನು ಗುರುತಿಸುವಲ್ಲಿ ಸಹಕಾರಿಯಾಗಲಿದೆ. ಮಾತ್ರವಲ್ಲದೆ ಬಾಹ್ಯಕಾಶದಲ್ಲಿ ಶತ್ರುಗಳ ಇರುವಿಕೆಯನ್ನು ಗುರುತಿಸಲು ಸಹಕಾರಿಯಾಗಿದೆ.

9ನೇ ತರಗತಿಯ ಓದುತ್ತಿರುವ ಪೃಥ್ವಿರಾಜ್.ಪಿ.ಪ್ರಭು (ಶ್ರೀ ಪುಂಡಳಿಕ ಪ್ರಭು ಹಾಗೂ ಶ್ರೀಮತಿ ನಾಗಮಣಿ ಪ್ರಭು ದಂಪತಿ ಪುತ್ರ.) ಆವಿಷ್ಕಾರ ಮಾಡಿರುವ ಸುಟ್ಟಗಾಯಗಳಿಗೆ ಪರಿಣಾಮಕಾರಿಯಾಗಿ ಬಳಸಬಹುದಾದ ಔಷಧ “Medicinal wax from seeds” ಕೂಡ ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತದೆ. ಶಾಲಾ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಎಲ್ಲಾ 3 ತಂಡಗಳು ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿರುತ್ತಾರೆ.