QR Code Business Card

ಏರೊ ಮಾಡೆಲಿಂಗ್ ಕಾರ್ಯಾಗಾರ ಉದ್ಘಾಟನೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕ ನಗರ, ತೆಂಕಿಲ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ನ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಎರಡು ದಿನಗಳ ಏರೊ ಮಾಡೆಲಿಂಂಗ್ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಸಂಚಾಲಕರಾದ ಶ್ರೀ ರವಿನಾರಾಯಣ ಎಂ. ಇವರು ಕೇಂದ್ರ ಸರಕಾರದ ಮಹಾತ್ವಾಂಕಾಕ್ಷೆಯ ಯೋಜನೆಯ ಭಾಗವಾದ ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ವೃದ್ದಿಸಲು ಸಹಕಾರಿಯಾಗಿದ್ದು ವಿದ್ಯಾರ್ಥಿಗಳ ಕುತೂಹಲಗಳಿಗೆ ಸೂಕ್ತ ಉತ್ತರಗಳು ದೊರಕುವುದರೊಂದಿಗೆ ವಿಮಾನಗಳ ತಯಾರಿಕೆಯ ಕುರಿತಾದ ಕೌಶಲ್ಯಗಳು ವೃದ್ಧಿಯಾಗಲಿ ಎಂದು ಹರಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ. ಮಾತನಾಡಿ ಪುರಾಣಗಳಲ್ಲಿ ವಿಮಾನಗಳ ಆವಿಷ್ಕಾರದ ಹಿನ್ನೆಲೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಾಗಾರದ ತರಬೇತುದಾರರುಗಳಾದ ಶ್ರೀ ಮಿಥುಲ್ ದಾಸ್, ಶ್ರೀ ನಿಹಾಲ್ ರಾಜೇಶ್ , ಶ್ರೀ ಅಶ್ವಥರಾಮ ಪ್ರಭು, ಶ್ರೀ ಕೆಲ್ವಿನ್ ಜೋಸೆಫ್ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.