QR Code Business Card

ವಿವೇಕಾನಂದ ಜಯಂತಿ ಆಚರಣೆ

“ಏಳಿ ಎದ್ದೇಳಿ, ಎಲ್ಲಿಯೂ ವಿಶ್ರಮಿಸದಿರಿ ಗುರಿ ಮುಟ್ಟುವ ತನಕ ಹೋರಾಡಿ” ಎಂಬ ವಿವೇಕದ ಮಾತುಗಳನ್ನಾಡಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು ದಿನಾಂಕ 12.01.2022ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ವಿವೇಕಾನಂದ ಜಯಂತಿಯನ್ನು ಸರಳ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ರವಿನಾರಾಯಣ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಆಡಳಿತ ಮಂಡಳಿ ಸದಸ್ಯರಾದ ಶ್ರೀ ಹರೇಕೃಷ್ಣ, ಡಾ.ಅಮೃತ ಕೃಷ್ಣಪ್ರಸಾದ್, ಶ್ರೀ ಕೃಷ್ಣಮೋಹನ್.ಪಿ.ಎಸ್, ಶ್ರೀ ಚಂದ್ರಶೇಖರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿವೇಕವಾಣಿ, ಭಾಷಣ, ಮತ್ತು ದೇಶಭಕ್ತಿಯನ್ನು ಸ್ಪುರಿಸುವ ಹಾಡುಗಳನ್ನು ಹಾಡಿದರು. ದಿವ್ಯಚೇತನಕ್ಕೆ ಪುಷ್ಪಾರ್ಚನೆ ಗೈಯುವುದರ ಮೂಲಕ ಗೌರವವನ್ನು ಸಲ್ಲಿಸಿದರು.

ಕು.ಸಾನ್ವಿ ಸ್ವಾಗತಿಸಿ, ಕು.ಸ್ತುತಿ ಶೆಟ್ಟಿ ವಂದಿಸಿದರು. ಮಾ|ಶುಭನ್ ಶೆಣೈ, ಕು ನೇಹ ಹೆಗ್ಡೆ, ಕು.ವೈಷ್ಣವಿ, ಹಾಗೂ ಮಾ.ವೇದ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.