QR Code Business Card

ರಾಷ್ಟ್ರಮಟ್ಟದ INSEF –Science Fair ನಲ್ಲಿ ಸ್ವರ್ಣ ಹಾಗೂ ಕಂಚಿನ ಪದಕ

ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ INSEF Science Society of India ನಡೆಸಿರುವ INSEF – National Science Fair ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ಇಲ್ಲಿನ 2 ಪ್ರಾಜೆಕ್ಟ್‌ಗಳು INSEF – Regional Science Fair ನಲ್ಲಿ ಸ್ವರ್ಣ ಪದಕ ಪಡೆದು, ರಾಷ್ಟ್ರಮಟ್ಟದಲ್ಲಿ ಸ್ವರ್ಣ ಹಾಗೂ ಕಂಚಿನ ಪದಕಕ್ಕೆ ಭಾಜನವಾಗಿದೆ.

ಜನವರಿ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ನಡೆದ INSEF – National Science Fair ಸ್ಪರ್ಧೆಯ ತೀರ್ಪನ್ನು ದಿನಾಂಕ 26-01-2022 ನೇ ಬುಧವಾರದಂದು ಪ್ರಕಟಿಸಲಾಗಿದ್ದು, ಜೂನಿಯರ್ ವಿಭಾಗದಲ್ಲಿ 8 ನೇ ತರಗತಿಯ ಸಾನ್ವಿ ಎಸ್. ಪಿ. [ನಿಡ್ಪಳ್ಳಿ ನಿವಾಸಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ.ಸುಂದರ ಪೂಜಾರಿ ಮತ್ತು ಭವಿತ.ಪಿ ಇವರ ಪುತ್ರಿ] ಮತ್ತು ಜಿ ಪ್ರತೀಕ್ಷಾ ಆಳ್ವ [ಪಡುಮಲೆ ನಿವಾಸಿ ಶ್ರೀ ಎ.ಸಿ. ಚಂದ್ರಶೇಖರ್ ಆಳ್ವ ಮತ್ತು ಉಷಾ.ಸಿ.ಆಳ್ವ ಇವರ ಪುತ್ರಿ] ಇವರ ’‘Multipurpose agricultural solar dryer’’, ಪ್ರಾಜೆಕ್ಟ್‌ಗೆ ಸ್ವರ್ಣ ಪದಕ, ಹಾಗೂ ಸೀನಿಯರ್ ವಿಭಾಗದಲ್ಲಿ 9 ನೇ ತರಗತಿಯ ಅನ್ವಿತ್.ಎನ್ (ಮುಡೋಡಿ ನಿವಾಸಿ ಶ್ರೀ ಶ್ರೀಪತಿ.ಎನ್ ಮತ್ತು ಶ್ರೀಮತಿ ವಿದ್ಯಾಲಕ್ಷ್ಮೀ.ಎ ಇವರ ಪುತ್ರ) ಇವರ ‘A herbal spray from weed, Wedelia trilobata ; to repell household vegetable pests’ ಪ್ರಾಜೆಕ್ಟ್‌ಗೆ ಕಂಚಿನ ಪದಕ ದೊರಕಿದೆ. ಇದರೊಂದಿಗೆ INSEF – Regional Science Fair ನ ತೀರ್ಪನ್ನು ಸೀನಿಯರ್ ವಿಭಾಗದಲ್ಲಿ 10 ನೇ ತರಗತಿಯ ತಮನ್.ಎಸ್.ಎನ್ (ಶ್ರೀ ಸುರೇಂದ್ರ ಎ ಮತ್ತು ಶ್ರೀಮತಿ ನಳಿನ ಕುಮಾರಿ ಇವರ ಪುತ್ರ) ಮತ್ತು ಚಿರಾಗ್.ಎಂ.ಎನ್ (ಪೆರ್ಲಂಪಾಡಿ ನಿವಾಸಿ ಶ್ರೀ ನಾರಾಯಣ ಎಂ ಮತ್ತು ಶ್ರೀಮತಿ ನಳಿನಿ ಎಂ.ಎನ್ ಇವರ ಪುತ್ರ) ಇವರ ‘[ISRAAS] Indian Space Research And Army Security- Satellite’ ಪ್ರಾಜೆಕ್ಟ್‌ಗೆ ಬೆಳ್ಳಿ ಪದಕ, ಹಾಗೂ 9 ನೇ ತರಗತಿಯ ಪೃಥ್ವಿರಾಜ್.ಪಿ.ಪ್ರಭು (ಶ್ರೀ ಪುಂಡಳಿಕ ಪ್ರಭು ಹಾಗೂ ಶ್ರೀಮತಿ ನಾಗಮಣಿ ಪ್ರಭು ದಂಪತಿ ಪುತ್ರ.) ಇವರ ‘Dwiprathi-Two Lane Fully Automatic Seeding Machine’, ಪ್ರಾಜೆಕ್ಟ್‌ಗೆ ಕಂಚಿನ ಪದಕ ಲಭಿಸಿದೆ. ಇವರಿಗೆ ವಿಜ್ಞಾನ ಶಿಕ್ಷಕರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.