QR Code Business Card

ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ತಮನ್ ಎಸ್. ಎನ್. ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಸಹಯೋಗದೊಂದಿಗೆ 17-2-2022 ರಂದು ಸರಕಾರಿ ಪ್ರೌಢ ಶಾಲೆ, ಬುಳೇರಿಮೊಗ್ರು, ಬೆಳ್ತಂಗಡಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ 2020-21 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾದ ತಮನ್ ಎಸ್. ಎನ್. (ಶ್ರೀ ಸುರೇಂದ್ರ ಎ ಮತ್ತು ಶ್ರೀಮತಿ ನಳಿನ ಕುಮಾರಿ ಇವರ ಪುತ್ರ) ಪ್ರಥಮ ಸ್ಥಾನ ಹಾಗೂ ರೂ. 5000/- ನಗದು ಬಹುಮಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ ಹಾಗೂ ಈ ಸ್ಪರ್ಧೆಯಲ್ಲಿ 9 ನೇ ತರಗತಿಯ ವಿದ್ಯಾರ್ಥಿಗಳಾದ ಅನ್ವಿತ್ ಎನ್. (ಮುಡೋಡಿ ನಿವಾಸಿ ಶ್ರೀ ಶ್ರೀಪತಿ.ಎನ್ ಮತ್ತು ಶ್ರೀಮತಿ ವಿದ್ಯಾಲಕ್ಷ್ಮೀ.ಎ ಇವರ ಪುತ್ರ), ಪೃಥ್ವಿರಾಜ್ ಪ್ರಭು(ಶ್ರೀ ಪುಂಡಳಿಕ ಪ್ರಭು ಹಾಗೂ ಶ್ರೀಮತಿ ನಾಗಮಣಿ ಪ್ರಭು ದಂಪತಿ ಪುತ್ರ.), ಮತ್ತು ಧಾತ್ರಿ.ಸಿ.ಎಚ್(ಡಾ. ದಿನೇಶ್ ಸಿ.ಹೆಚ್ ಮತ್ತು ಶ್ರೀಮತಿ ಪದ್ಮಲಕ್ಷ್ಮಿ ಇವರ ಪುತ್ರಿ) ಇವರು ಯೋಜನೆಗಳನ್ನು ಬಹಳ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿರುತ್ತಾರೆ. ಈ ಎಲ್ಲಾ ತಂಡಗಳು ಶಾಲಾ ವಿಜ್ಞಾನ ಶಿಕ್ಷಕರ ಬಳಗದ ಮಾರ್ಗದರ್ಶನದಲ್ಲಿ ತಮ್ಮ ಯೋಜನೆಗಳನ್ನು ತಯಾರಿಸಿ ಮಂಡಿಸಿರುತ್ತಾರೆ ಎಂದು ಮುಖ್ಯೋಪಾಧ್ಯಾಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.