ರಾಷ್ಟ್ರೋತ್ಥಾನ ಸಂವಿತ್ ಶಿಕ್ಷಣ ಸಂಶೋಧನಾ ಸಂಸ್ಥೆ ವಿದ್ಯಾಭಾರತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಆಯೋಜಿಸಿದ 2 ದಿನದ ಸಂವಿತ್ ಯೋಗ ಶಿಕ್ಷಕರ ಕಾರ್ಯಾಗಾರವು 6-5-2022 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾಭಾರತಿ ಕ್ಷೇತ್ರಿಯ ಸಹಕಾರ್ಯದರ್ಶಿ, ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ಮತ್ತು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಸಂಚಾಲಕರಾದ ಶ್ರೀ ವಸಂತ ಮಾಧವ ಅವರು ನಮ್ಮ ಜೀವನದಲ್ಲಿ ಸುಖ, ಆರೋಗ್ಯ, ಸಮಾಧಾನ, ಸಂತೃಪ್ತಿ ಸಿಗಬೇಕಾದರೆ ನಾವು ನಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಮಕ್ಕಳನ್ನು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಸಧೃಡರನ್ನಾಗಿಸಲು ಪಂಚಕೋಶಾತ್ಮಕ ವಿಕಾಸ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಹಾಗೆಯೇ ಸಂವಿತ್ ಸಂಸ್ಥೆಯ ಮೈಸೂರು ವಿಭಾಗದ ಸಂಚಾಲಕರಾದ ಶ್ರೀ ಮಹೇಶ್.ಜಿ ಇವರು ಸಂವಿತ್ ಸಂಸ್ಥೆಯ ಪರಿಚಯವನ್ನು ಮಾಡಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯೆರಾದ ಶ್ರೀಮತಿ ಮಾಲಾ ಮಹೇಶ್ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಯೋಗಪರಿವೀಕ್ಷಣಾಧಿಕಾರಿ ಮತ್ತು ಸಂವಿತ್‌ನ ಸಂಚಾಲಕರಾದ ಶ್ರೀ ಸಂಜಯ್.ಜಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಶ್ರೀ ಚಂದ್ರಶೇಖರ್ ಜಿ. ವಂದಿಸಿದರು.