QR Code Business Card

ಚೆಸ್ ಪಂದ್ಯಾಟ – ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ವತಿಯಿಂದ ದ.ಕ.ಜಿ.ಪ.ಉ.ಹಿರಿಯ ಪ್ರಾಥಮಿಕ ಶಾಲೆ, ಕುಡಿಪಾಡಿ ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರೌಢ ಶಾಲಾ ವಿಭಾಗದ ಹುಡುಗರು- ಧನುಷ್‌ರಾಮ್, 10 ನೇ ತರಗತಿ (ಕಿಯೋನಿಕ್ಸ್‌ನ ಮಾಲಕ ದಿನೇಶ್ ಪ್ರಸನ್ನ ಮತ್ತು ಉಮಾ.ಡಿ.ಪ್ರಸನ್ನ ಇವರ ಪುತ್ರ), ಪ್ರಣೀಲ್ ರೈ, 10 ನೇ ತರಗತಿ (ಪ್ರಕಾಶ್ ಕುಮಾರ್ ರೈ ಮತ್ತು ಸತ್ಯಲತ ಪ್ರಕಾಶ್ ಇವರ ಪುತ್ರ) ಪ್ರೌಢ ಶಾಲಾ ವಿಭಾಗದ ಹುಡುಗಿಯರು – ಸುಶ್ಮಿತ ಟಿ. ರಾವ್ 10 ನೇ ತರಗತಿ, (ತ್ರಿವಿಕ್ರಮ ರಾವ್ ಮತ್ತು ಶಾರದಾ ಇವರ ಪುತ್ರಿ), ಅವನಿ, 10 ನೇ ತರಗತಿ (ಅಮೃತಕರ ಭಟ್ ಮತ್ತು ಸುಮ.ಎ ಇವರ ಪುತ್ರಿ).