QR Code Business Card

ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

ವಿದ್ಯಾಭಾರತಿ ಕರ್ನಾಟಕ, ದ.ಕ.ಜಿಲ್ಲೆ ಹಾಗೂ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಆಶ್ರಯದಲ್ಲಿ ಆಗಸ್ಟ್ 24 ರಂದು ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 14 ರ ವಯೋಮಾನದ ಮತ್ತು 17 ರ ವಯೋಮಾನದ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

14 ರ ವಯೋಮಾನದ ಬಾಲಕರ ತಂಡದಲ್ಲಿ ೮ನೇ ತರಗತಿಯ ಮನ್ವಿತ್ ನೆಕ್ಕರೆ(ಕಬಕ ನಿವಾಸಿ ಶ್ರೀ ಉಮೇಶ್.ಎನ್ ಮತ್ತು ಕವಿತ ಇವರ ಪುತ್ರ), ಪ್ರಣಾಮ್.ಪಿ.ಶೆಟ್ಟಿ (ಪುಣಚ ನಿವಾಸಿ ಪ್ರವೀಣ್.ಎಸ್ ಮತ್ತು ಸತ್ಯ ಇವರ ಪುತ್ರ), ಸವಂತ್ ರೈ.ಎಂ (ಕೆದಂಬಾಡಿ ನಿವಾಸಿ ಶ್ರೀ ಸುರೇಶ್ ರೈ ಮತ್ತು ಸೌಮ್ಯ ಇವರ ಪುತ್ರ), ಆರ್ಯನ್.ಜೆ(ಪೇರಾಜೆ ನಿವಾಸಿ ಶ್ರೀ ಜಗದೀಶ್ ಮತ್ತು ಪವಿತ್ರ ಇವರ ಪುತ್ರ), ೭ನೇ ತರಗತಿಯ ಮೋಕ್ಷಿತ್ (ನೇರಳಕಟ್ಟೆ ನಿವಾಸಿ ಶ್ರೀ ಜಗದೀಶ್ ಮತ್ತು ಪ್ರೇಮ ಇವರ ಪುತ್ರ), ಪ್ರೀತಮ್ (ಮಿತ್ತೂರು ನಿವಾಸಿ ಜಯಂತ ಗೌಡ ಮತ್ತು ಲೀಲಾವತಿ ಇವರ ಪುತ್ರ), ಪ್ರಣಾಮ್ (ಮಿನಾವು ನಿವಾಸಿ ಶ್ರೀ ಕೇಶವ ಮತ್ತು ಶುಭಶ್ರೀ ಇವರ ಪುತ್ರ), ದನ್ವಿತ್ (ಬಲ್ನಾಡು ನಿವಾಸಿ ಶ್ರೀ ಕೆ.ಮಾಧವ ಗೌಡ ಮತ್ತು ಯಶೋಧ ಇವರ ಪುತ್ರ), ತ್ರಿಜಲ್ (ಕೈಕಾರ ನಿವಾಸಿ ಶ್ರೀ ವಿನೋದ್ ಮತ್ತು ಶರಿಕ ಇವರ ಪುತ್ರ), ವೈಶಾಖ್ (ಬುಳ್ಳೇರಿಕಟ್ಟೆ ನಿವಾಸಿ ಶ್ರೀ ಗಣೇಶ್ ಎಮ್ ಮತ್ತು ಸರಸ್ವತಿ.ಪಿ ಇವರ ಪುತ್ರ) ಮತ್ತು ೬ನೇ ತರಗತಿಯ ಚಿನ್ಮಯಿ (ಒಳತ್ತಡ್ಕ ನಿವಾಸಿ ಶ್ರೀ ಸೇಸಪ್ಪ ಮತ್ತು ಚಂದ್ರಿಕಾ ಇವರ ಪುತ್ರ), ಮತ್ತು ರಿತೇಶ್ (ಕಬಕ ನಿವಾಸಿ ಶ್ರೀ ವೆಂಕಪ್ಪ ಮತ್ತು ವೀಣ ಇವರ ಪುತ್ರ) ಹಾಗೂ

17ರ ವಯೋಮಾನದ ಬಾಲಕರ ತಂಡದಲ್ಲಿ 10 ನೇ ತರಗತಿಯ ಶರಣ್.ಎಸ್.ರೈ (ಕೃಷ್ಣನಗರ ನಿವಾಸಿ ಶ್ರೀ ಸೀತಾರಾಮ್ ಮತ್ತು ಸವಿತ ರೈ ಇವರ ಪುತ್ರ), ಮೊಹಮ್ಮದ್ ಅನಸ್ (ಬುಳ್ಳೇರಿಕಟ್ಟೆ ನಿವಾಸಿ ಶ್ರೀ ಅಶ್ರಫ್ ಮತ್ತು ರಹಿಮತ್ ಇವರ ಪುತ್ರ), ಲಿಖಿತ್ ಗೌಡ (ಸಂಟ್ಯಾರ್ ನಿವಾಸಿ ಶ್ರೀ ಚೆನ್ನಪ್ಪ ಮತ್ತು ಯಶಕಲಾ ಇವರ ಪುತ್ರ), ಯಶಸ್ವಿನ್.ಡಿ (ಕಬಕ ನಿವಾಸಿ ಲೋಕೇಶ್ ಮತ್ತು ಲೀಲಾವತಿ ಇವರ ಪುತ್ರ), ಕಿಶನ್.ಬಿ (ಉರಿಮಜಲು ನಿವಾಸಿ ಶ್ರೀ ದಿನೇಶ್ ಕುಮಾರ್ ಮತ್ತು ಪೂರ್ಣಿಮ ಇವರ ಪುತ್ರ), ಶಶಾಂಕ್.ಎಂ (ಸುಳ್ಯ ನಿವಾಸಿ ಶ್ರೀ ಮೋಹನಪ್ಪ ಮತ್ತು ಶಾಂತಿ ಇವರ ಪುತ್ರ), ಪ್ರಧಾನ್.ಕೆ (ತೆಂಕಿಲ ನಿವಾಸಿ ಚಂದ್ರ.ಕೆ ಮತ್ತು ಶಶಿಕಲಾ ಇವರ ಪುತ್ರ), ಜೀವಿತ್.ಡಿ (ಕೋಡಿಮರ ನಿವಾಸಿ ಶ್ರೀ ಪ್ರೇಮಚಂದ್ರ ಮತ್ತು ಜಯಶ್ರೀ ಇವರ ಪುತ್ರ), ತ್ರಿಶೂಲ್‌ರಾಜ್.ಕೆ.ಎಲ್ (ಪುತ್ತೂರು ನಿವಾಸಿ ಶ್ರೀಮತಿ ಲೋಕಮಣಿ ಇವರ ಪುತ್ರ), ಮತ್ತು 9 ನೇ ತರಗತಿಯ ಧ್ಯಾನ್(ಕಬಕ ನಿವಾಸಿ ಆನಂದ.ಕೆ ಮತ್ತು ಮಮತ.ಕೆ ಇವರ ಪುತ್ರ), ಚವನ್ (ಪಡ್ಡಾಯೂರು ನಿವಾಸಿ ಶ್ರೀ ಕುಮಾರ್ ನಾಯಕ್ ಮತ್ತು ಇಂದಿರಾ.ಪಿ ಇವರ ಪುತ್ರ), 10 ನೇ ತರಗತಿಯ ನಿಶಾಂತ್ (ಪೆರಿಯತೋಡಿ ನಿವಾಸಿ ಶ್ರೀ ಕೆ.ರವಿ ಮತ್ತು ಪ್ರಮೀಣ ಇವರ ಪುತ್ರ) ಇವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.