ವಿದ್ಯಾಭಾರತಿ ಜ್ಞಾನವಿಜ್ಞಾನ ಮೇಳ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗಳು ಆಗಸ್ಟ್ 26 ರಂದು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ನಡೆಯಿತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶಿಶು ವರ್ಗದ ವಿಜ್ಞಾನ ರಸಪ್ರಶ್ನೆಯಲ್ಲಿ ರಚನಾ (4 ನೇ ತರಗತಿ) ಶರಧಿ (5ನೇ ತರಗತಿ) ಸ್ನೀಗ್ಧ (5 ನೇ ತರಗತಿ) ಇವರ ತಂಡ ತೃತೀಯ, ಇನ್ನೋವೇಟಿವ್ ಮಾದರಿಯಲ್ಲಿ ಶಮಂತ (5 ನೇ ತರಗತಿ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲವರ್ಗದ ವಿಜ್ಞಾನ ಮಾಡೆಲ್ ಸ್ಪರ್ಧೆಯಲ್ಲಿ 6ನೇ ತರಗತಿಯ ಅಮೃತ ರಶ್ಮಿ ಸೆನ್ಸರ್ ಬೇಸ್ಡ್ ಮಾಡೆಲ್ ವಿಷಯದಲ್ಲಿ ದ್ವಿತೀಯ, ಏಳನೆಯ ಅನನ್ಯ ಹಾಗೂ ನಿಲಿಶ್ಕ ತಂಡ ಲೈಟ್ ಅಂಡ್ ಇಟ್ಸ್ ಅಪ್ಲಿಕೇಶನ್ ವಿಷಯದಲ್ಲಿ ದ್ವಿತೀಯ, ವಿಜ್ಞಾನ ಪ್ರಯೋಗದಲ್ಲಿ ಲಕ್ಷ್ಮಿ ಯು(8ನೇ ತರಗತಿ) ಹಾಗೂ ಜಿ ವೈಷ್ಣವಿ ಪೈ(8ನೇ ತರಗತಿ)ವಿಜ್ಞಾನ ಪತ್ರ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಿಶೋರ ವರ್ಗದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಧನುಶ್ ರಾಮ್, ಅಭಿರಾಮ್ ಹಾಗೂ ಅಜಯ ರಾಮ್ ತಂಡವು ಪ್ರಥಮ, ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ ಅರ್ಚನಾ ಕಿಣಿ (10ನೇ),ಇನ್ನೋವೇಟಿವ್ ಮಾಡೆಲ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು 10ನೇ ಪ್ರಥಮ ಸ್ಥಾನ ಪಡೆದು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜ್ಞಾನ ಪ್ರಯೋಗದಲ್ಲಿ 10ನೆಯ ಅನ್ವಿತ್ ಎನ್ ತೃತೀಯ, ಅಪ್ಲಿಕೇಶನ್ ಆಫ್ spectrum ಆಫ್ ಲೈಟ್ ವಿಜ್ಞಾನಮಾದರಿಯಲ್ಲಿ ತ್ರಿಶೂಲ್ ಹಾಗೂ ಶ್ರೇಯಸ್ (9ನೇ) ಅವರ ತಂಡ ದ್ವಿತೀಯ, ಮಾನವ ವಿಸರ್ಜನಾಂಗ ಮಾದರಿಯಲ್ಲಿ ಒಂಬತ್ತನೆಯ ಸೃಷ್ಟಿ ತೃತೀಯ ಹಾಗೂ ಅಪ್ಲಿಕೇಶನ್ಸ್ ಆಫ್ ಸೌಂಡ್ ವೇವ್ ಮಾದರಿ ತಯಾರಿಯಲ್ಲಿ ಅಮೋಘ ನಾಯಕ್ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಶಿಶು ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ ಐದನೆ ತರಗತಿ ಯ ಧನಿಶ್, ಗೌರವ್, ಸಾನ್ವಿ ಅವರ ತಂಡ ದ್ವಿತೀಯ, ಗಣಿತ ಮಾದರಿಯಲ್ಲಿ ಲಿಖಿತ (5ನೇ) ಜಿಯೋಮೆಟ್ರಿಕ್ ಶೇಪ್ಸ್ ಮಾದರಿಯಲ್ಲಿ ಪ್ರಥಮ, ಸಿದ್ಧಿ (5 ನೇ) ಮಾಪನ ಮಾದರಿಯಲ್ಲಿ ಪ್ರಥಮ,ಪ್ರಾಪ್ತಿ (5 ನೇ) ಭಿನ್ನ ಮಿತಿಯ ಮಾದರಿಯಲ್ಲಿ ತೃತೀಯ ಹಾಗೂ ಗಣಿತ ಪ್ರಯೋಗದಲ್ಲಿ ಐದನೇ ತರಗತಿಯ ಭವಿಷ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
ಬಾಲ ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ ನಿರೀಕ್ಷಿತ್ ಹೆಗ್ಡೆ7ನೇತರಗತಿ, ಶ್ರೇಯಸ್ ವರಂಬಳಿತಾಯ(8ನೇ) ಸುಶಾಂತ್ ಎ (6ನೇ) ಅವರ ತಂಡ ಪ್ರಥಮ, ಗಣಿತ ಮಾದರಿಯಲ್ಲಿ 7ನೇ ತರಗತಿಯ ಶಮನ್ ಕ್ಷೇತ್ರಫಲ ಹಾಗೂ ಆಯತನ ಮಿತಿಯ ಮಾದರಿಯಲ್ಲಿ ಪ್ರಥಮ, 8ನೇ ತರಗತಿಯ ವೇದ ವಿ ರೆಗ್ಯುಲರ್ ಪಾಲಿಗನ್ ಆಧಾರಿತ ಮಾದರಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೂ 8 ನೇ ತರಗತಿಯ ಪ್ರೀತಿ ಪಿ ಪೈ ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಿಶೋರ ವರ್ಗದ ಗಣಿತ ಮಾದರಿ ಸ್ಪರ್ಧೆಯಲ್ಲಿ 10ನೇ ತರಗತಿಯ ವಸುಧ ಪೈಥಾಗರಸ್ ಥಿಯರಮ್ ಆಧಾರಿತ ಮಾದರಿಯಲ್ಲಿ ದ್ವಿತೀಯ, 9ನೇ ತರಗತಿಯ ಹರ್ಷಿಕ ಟ್ರಿಗನಾಮೆಟ್ರಿ ಆಧಾರಿತ ಮಾದರಿಯಲ್ಲಿ ಹಾಗೂ ಧನ್ವಿ (9ನೇ) ಇನ್ನೋವೇಟಿವ್ ಮಾದರಿಯಲ್ಲಿ ದ್ವಿತೀಯ, ಗಣಿತ ಪ್ರಯೋಗದಲ್ಲಿ 10ನೇ ತರಗತಿಯ ಧಾತ್ರಿ ಸಿ.ಹೆಚ್ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಕಥನ ಸ್ಪರ್ಧೆಯಲ್ಲಿ ಶಿಶು ವಿಭಾಗದ ಕ್ಷಮಾ ಭಟ್ ಹಾಗೂ ಬಾಲ ವರ್ಗದ ದೇವಿ ಪ್ರಣಮ್ಯ ಇವರು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಅಟಲ್ ಟಿಂಕರಿಂಗ್ ಮಾದರಿ ತಯಾರಿಯಲ್ಲಿ ಹತ್ತನೇ ತರಗತಿಯ ಯುಕ್ತ ಶ್ರೀ ಹಾಗೂ ನೇಹ ಇವರ ತಂಡ ಪ್ರಥಮ, ಎಂಟನೇ ತರಗತಿಯ ಚಿನ್ಮಯಿ ಎಲ್ ಹಾಗೂ ದಿಹರ್ಷ ಇವರ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಶಿಶುವರ್ಗದಲ್ಲಿ ಐದನೇ ತರಗತಿಯ ಅನಿಶ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.