QR Code Business Card

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ದಿನಾಂಕ 03 .09 .2022 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇದರ ಆಶ್ರಯದಲ್ಲಿ ಆಫೀಸರ್ಸ್ ಕ್ಲಬ್ ದರ್ಬೆ ಪುತ್ತೂರು ಇಲ್ಲಿ ವಿದ್ಯಾ ಭಾರತೀ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಶಾಲಾ ಹಿರಿಯ ವಿದ್ಯಾರ್ಥಿನಿ ಹಾಗೂ ರಾಷ್ಟ್ರ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಪಟು ಬಿಂದುಶ್ರೀ. ಯಸ್. ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಶಿವಪ್ರಕಾಶ್ ಯಂ. ವಹಿಸಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಪ್ರಾಂತ ಖೆಲ್ ಖುದ್ ಪ್ರಮುಖ್ ಕರುಣಾಕರ್ ಯಂ. ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ಕುಮಾರ್ ರೈ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಕೆ ನಿರ್ವಹಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಟನ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಮತಾ ಉಪಸ್ಥಿತರಿದ್ದು ಬಹುಮಾನ ವಿತರಣೆ ಮಾಡಿದರು. ಕಾರ್ಯ ಕ್ರಮದಲ್ಲಿ ದಕ್ಷಿಣ ಪ್ರಾಂತ ಖೇಲ್ ಖೂದ್ ಪ್ರಮುಖ್ ಕರುಣಾಕರ ಉಪಸ್ಥಿತರಿದ್ದರು. ಕಾರ್ಯ ಕ್ರಮದ ನಿರೂಪಣೆ ಯನ್ನು ದೈಹಿಕ ಶಿಕ್ಷಣ ಶಿಕ್ಷಕ ಪವನ್ ಕುಮಾರ್ ನಿರ್ವಹಿಸಿದರು.

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಫಲಿತಾಂಶದ ವಿವರ ಈ ಕೆಳಗಿನಂತಿದೆ:

ತರುಣ ವರ್ಗ ಬಾಲಕರು: ಪ್ರಥಮ: ಶಕ್ತಿ.ಪಿ.ಯು.ಕಾಲೇಜು, ಮಂಗಳೂರು, ದ್ವಿತೀಯ: ವಿವೇಕಾನಂದ ಪಿ.ಯು.ಕಾಲೇಜು, ಪುತ್ತೂರು. ತರುಣ ವರ್ಗ ಬಾಲಕಿಯರು: ಪ್ರಥಮ: ವಿವೇಕಾನಂದ ಪಿ.ಯು.ಕಾಲೇಜು, ಪುತ್ತೂರು, ದ್ವಿತೀಯ: ಶ್ರೀರಾಮ ಪಿ.ಯು.ಕಾಲೇಜು, ಕಲ್ಲಡ್ಕ.

ಬಾಲವರ್ಗ ಬಾಲಕರು: ಪ್ರಥಮ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ದ್ವಿತೀಯ: ಶ್ರೀರಾಮ ಶಾಲೆ, ಕಲ್ಲಡ್ಕ. ಬಾಲವರ್ಗ ಬಾಲಕಿಯರು: ಪ್ರಥಮ: ಶಾರದಾ ವಿದ್ಯಾನಿಕೇತನ, ಮಂಗಳೂರು, ದ್ವಿತೀಯ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು.

ಕಿಶೋರ ವರ್ಗ ಬಾಲಕರು: ಪ್ರಥಮ: ಶಕ್ತಿ ವಿದ್ಯಾಲಯ, ಮಂಗಳೂರು, ದ್ವಿತೀಯ: ಶಾರದಾ ವಿದ್ಯಾನಿಕೇತನ, ಮಂಗಳೂರು, ಕಿಶೋರ ವರ್ಗ ಬಾಲಕಿಯರು: ಪ್ರಥಮ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ದ್ವಿತೀಯ: ಶಾರದಾ ವಿದ್ಯಾನಿಕೇತನ, ಮಂಗಳೂರು,